ಮಂಜೇಶ್ವರ: ಮೀಯಪದವು ಬಳಿಯ ಚಿಗುರುವಾದೆ ನಿವಾಸಿ ಮೋಹನ್‍ದಾಸ್ ಎಂಬವರ ಪುತ್ರ ರಂಜಿತ್ (40)ಅವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೆಂಟ್ರಿಂಗ್ ಕಾರ್ಮಿಕನಾಗಿದ್ದ ರಂಜಿತ್ ಅವರ ಪತ್ನಿ ಹಾಗೂ ಮಕ್ಕಳು ಸೋಮವಾರ ವಿಟ್ಲದಲ್ಲಿರುವ ಸಂಬಂಧಿಕರ ಮನೆಗೆ ಹಾಗೂ ತಂದೆ, ತಾಯಿ ಮಂಗಳೂರಿನ ಸಂಬಂಧಿಕರ ಮನೆಗೂ ತೆರಳಿದ್ದ ಸಂದರ್ಭ ಕೃತ್ಯವೆಸಗಿದ್ದಾರೆ. ರಂಜಿತ್ ಮನೆಯಿಂದ ಹೊರಬಾರದ ಹಿನ್ನೆಲೆಯಲ್ಲಿ ಸ್ಥಳೀಯರು ಅಲ್ಲಿಗೆ ತಲುಪಿ ನೋಡಿದಾಗ ಮನೆಯೊಳಗೆ ಲೈಟ್‍ಗಳು ಉರಿಯುತ್ತಿದ್ದು, ಫ್ಯಾನ್ ತಿರುಗುತ್ತಿರುವುದು ಕಂಡುಬಂದಿತ್ತು. ಕಿಟಕಿ ಮೂಲಕ ನೋಡಿದಾಗ ರಂಜಿತ್ ಅಡುಗೆ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಸಂಬಂಧಿಕರನ್ನು ಕರೆಸಿ, ನೇಣಿನಿಂದ ಕೆಳಗಿಳಿಸಿ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಗಿರಲಿಲ್ಲ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

