HEALTH TIPS

ಐಕ್ಯರಂಗ ಸರ್ಕಾರದಲ್ಲಿ ಕಾಸರಗೋಡಿಗೆ ಪ್ರಾತಿನಿಧ್ಯ-ಎಕೆಎಂ ಬೆಂಬಲಿಗರಲ್ಲಿ ಆಶಾವಾದ

ಕಾಸರಗೋಡು: ಕೇರಳದಲ್ಲಿ ಚುನಾವಣೋತ್ತರ ಸಮೀಕ್ಷೆಯಂತೆ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಭರ್ಜರಿ ಗೆಲುವಿನೊಂದಿಗೆ ಸರ್ಕಾರ ರಚನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು,  ಸಚಿವ ಸಂಪುಟದಲ್ಲಿ ಕಾಸರಗೋಡು ಜಿಲ್ಲೆಗೆ ಪ್ರಾತಿನಿಧ್ಯ ಲಭಿಸುವುದು ಬಹುತೇಕ ಖಚಿತವಾಗಿದೆ.  ಮುಸ್ಲಿಂಲೀಗಿನಿಂದ ಆಯ್ಕೆಯಾಗಿರುವ ಮಂಜೇಶ್ವರದ ನೂತನ ಶಾಸಕ ಎಕೆಎಂ ಅಶ್ರಫ್ ಅವರಿಗೆ ಸಚಿವ ಸ್ಥಾನದ ಸಾಧ್ಯತೆಯೂ ಹೆಚ್ಚಾಗಿದೆ. 

ಐಕ್ಯರಂಗದ ಪ್ರಮುಖ ಮಿತ್ರಪಕ್ಷ ಮುಸ್ಲಿಂಲೀಗ್‍ನಿಂದ ಈ ಹಿಂದೆ ಆಯ್ಕೆಯಾಗಿದ್ದ ಚೆರ್ಕಳಂ ಅಬ್ದುಲ್ಲ ಹಾಗೂ ಸಿ.ಟಿ ಅಹಮ್ಮದಾಲಿ ಅವರಿಗೆ ಐಕ್ಯರಂಗ ಸರ್ಕಾರದಲ್ಲಿ ಸಚಿವ ಸ್ಥಾನ ಲಭಿಸಿತ್ತು.  ಪ್ರಮುಖ ಮಿತ್ರ ಪಕ್ಷ ಮುಸ್ಲಿಂಲೀಗಿಗೆ ಈ ಬಾರಿ 22ಸ್ಥಾನ ಲಭಿಸಿದ್ದು,  ವರಿಷ್ಟ ನಾಯಕ ಕೆ. ಪಿ. ಕುಞËಲಿಕುಟ್ಟಿ, ಕೆ. ಎಂ. ಷಾಜಿ, ಎನ್. ಷಂಸುದ್ದೀನ್, ಪಿ. ಕೆ. ಬಶೀರ್, ಅಬಿದ್ ಹುಸೇನ್ ತಂಙಳ್ ಹಾಗೂ ಎಕೆಎಂ ಅಶ್ರಫ್ ಅವರಿಗೆ ಸಚಿವ ಪದವಿ ನೀಡಲು ಪಕ್ಷ ಪರಿಗಣಿಸುತ್ತಿರುವುದಾಗಿಯೂ ಮಾಹಿತಿಯಿದೆ. ಇದೇ ವೇಳೆ ಲೀಗ್ ನಾಯಕ ಪಾರಕಲ್ ಅಬ್ದುಲ್ಲ ಅವರನ್ನು ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಪರಿಗಣಿಸುತ್ತಿರುವುದಾಗಿಯೂ ಮಾಹಿತಿಯಿದೆ. 

ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಎಕೆಎಂ ಅಶ್ರಫ್ ಎರಡನೇ ಬಾರಿಗೆ ಆಯ್ಕೆಯಾಗಿದ್ದು, ತನ್ನ ಮೊದಲ ಅವಧಿಯಲ್ಲೇ ವಿಧಾನಸಭೆಯಲ್ಲಿ ಉತ್ತಮ ಸಂಸದೀಯ ಪಟುವಾಗಿ ಸಾಧನೆ ತೋರಿದ್ದರು.  ಕಾಸರಗೋಡಿಗೆ ಸಚಿವ ಸಂಪುಟದಲ್ಲಿ  ಪ್ರಾತಿನಿಧ್ಯ ಮತ್ತು ಮಂಜೇಶ್ವರ ಮಂಡಲದ ಚುನಾವಣಾ ಪ್ರಾಧಾನ್ಯತೆ ಪರಿಗಣಿಸಿ ಎಕೆಎಂ ಅಶ್ರಫ್ ಅವರಿಗೆ ಸಚಿವ ಸ್ಥಾನ ಒಲಿಯುವುದು ಬಹುತೇಕ ಖಚಿತವಾಗಿದೆ.  

ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಅಂತಿಮ ತೀರ್ಮಾನ ಇನ್ನೂ ಬಾಕಿ ಇರುವಂತೆ, ಮುಸ್ಲಿಂ ಲೀಗ್ ತನ್ನ ಸಚಿವ ಸ್ಥಾನಗಳನ್ನು ಈಗಾಗಲೇ ಖಚಿತಪಡಿಸಿಕೊಂಡು ಐಕ್ಯರಂಗದೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿರುವುದಾಗಿ ಮಾಹಿತಿಯಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries