ಬಾಳೆಹೊನ್ನೂರು: ದೇಶದಾದ್ಯಂತ ಸಂಚಲನ ಮೂಡಿಸಿರುವ ಕಾಕ್ರೋಚ್ ಪಕ್ಷಕ್ಕೆ ಪ್ರತಿಯಾಗಿ ಕರ್ನಾಟಕದ ರಂಭಾಪುರಿ ಪೀಠದ ಬಿ. ಜಗದೀಶ್ಚಂದ್ರ ಎಂಬುವರು 'ಲಕ್ಷಣರೇಖೆ ಹಾಗೂ ಹಿಟ್' ಪಕ್ಷ ಹುಟ್ಟು ಹಾಕಿದ್ದಾರೆ. ಆ ಮೂಲಕ ಜಿರಳೆಗಳ ಹಾವಳಿ ನಿಯಂತ್ರಿಸುವುದಾಗಿ ತಿಳಿಸಿದ್ದಾರೆ.
'ಲಕ್ಷಣರೇಖೆ ಹಾಗೂ ಹಿಟ್ ಪಕ್ಷಕ್ಕೆ ನಾನೇ ರಾಷ್ಟ್ರೀಯ ಅಧ್ಯಕ್ಷ. ಇನ್‍ಸ್ಟಾದಲ್ಲಿ 23 ಸಾವಿರಕ್ಕೂ ಹೆಚ್ಚು ಫಾಲೊವರ್ ಇದ್ದಾರೆ' ಎಂದು ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.
'ದೇಶದ ಭದ್ರತಗೆ ಸಂಚಕಾರ ಬಂದಾಗ ದೇಶಭಕ್ತರ ತಂಡ ಸಮರ್ಥ ವಾಗಿ ಎದುರಿಸಲು ತಯಾರಿದೆ. ಈ ದೇಶದ ಯುವ ಪಡೆಯೇ ಕಾಕ್ರೋಚ್ ಪಡೆಯನ್ನು ಎದುರಿಸುತ್ತದೆ. ವಿದೇಶಿ ಗರು, ವಿದೇಶಿ ಹಣದಿಂದ ಕಾಕ್ರೋಚ್ ಪಾರ್ಟಿ ನಡೆಯುತ್ತಿದೆ. ಅದು ಬಹಳ ದಿನ ಉಳಿಯುವುದಿಲ್ಲ. ಎಲ್ಲವನ್ನೂ ಎದುರಿಸಿಯೇ ಸಿದ್ದ' ಎಂದು ಅವರು ಹೇಳಿದರು.

