HEALTH TIPS

ತಿರುಪತಿ ಲಡ್ಡು ಪ್ರಸಾದ ಕಲಬೆರಕೆ: ಹಿರಿಯ ಅಧಿಕಾರಿಗಳೇ ಹೊಣೆ ಎಂದ ಏಕಸದಸ್ಯ ಸಮಿತಿ

ಹೈದರಾಬಾದ್‌: ತಿರುಪತಿ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರ ಪ್ರದೇಶ ಸರ್ಕಾರ ನೇಮಿಸಿದ್ದ ಏಕಸದಸ್ಯ ಸಮಿತಿ ವರದಿ ಸಲ್ಲಿಸಿದ್ದು, ಅಧಿಕಾರಿಗಳು ಮತ್ತು ಖರೀದಿ ಸಮಿತಿಯ ಗಂಭೀರವಾದ ಆಡಳಿತ ವೈಫಲ್ಯವನ್ನು ಪತ್ತೆ ಮಾಡಿದೆ.

ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಉಲ್ಲೇಖಿಸಿದ್ದ ಅಂಶಗಳನ್ನು ಪರಿಶೀಲಿಸಿ ಹೊಣೆಗಾರರನ್ನು ಗುರ್ತಿಸುವ ಮತ್ತು ಲೋಪ ಪತ್ತೆ ಮಾಡುವ ಜವಾಬ್ದಾರಿಯನ್ನು ಮಾಜಿ ಮುಖ್ಯಕಾರ್ಯದರ್ಶಿ ದಿನೇಶ್ ಕುಮಾರ್‌ ಅವರ ನೇತೃತ್ವದ ಸಮಿತಿಗೆ ನೀಡಲಾಗಿತ್ತು.

ಏಕ ಸದಸ್ಯ ಸಮಿತಿ ಕೆಲ ದಿನಗಳ ಹಿಂದೆ ಸಲ್ಲಿಸಿದ ವರದಿಯು ಹಿರಿಯ ಅಧಿಕಾರಿಗಳು ಮತ್ತು ಖರೀದಿ ವಿಭಾಗವನ್ನು ಹೊಣೆಯಾಗಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮಾರೆಡ್ಡಿ ಅವರನ್ನು ಮುಖ್ಯ ಹೊಣೆಗಾರರನ್ನಾಗಿ ಮಾಡಲಾಗಿದೆ. ಗುತ್ತಿಗೆ ನಿಯಮಗಳ ಉಲ್ಲಂಘನೆ, ಕಲಬೆರಕೆ ಖಚಿತಪಟ್ಟರೂ ಕ್ರಮ ಕೈಗೊಳ್ಳದಿರುವುದು ಮತ್ತು ಶಂಕಿತ ಪೂರೈಕೆದಾರರನ್ನೇ ಮುಂದುವರಿಸಿದ ಆರೋಪವನ್ನು ರೆಡ್ಡಿ ಅವರ ಮೇಲೆ ಹೊರಿಸಲಾಗಿದೆ.

ಮತ್ತೊಬ್ಬ ಆಡಳಿತಾಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ಸೇರಿದಂತೆ ಟಿಟಿಡಿಯ ಅಂದಿನ ಖರೀದಿ ಸಮಿತಿ ಈ ಎಲ್ಲಾ ಅಕ್ರಮಕ್ಕೆ ಸಹಕಾರ ನೀಡಿದೆ ಎಂದು ವರದಿ ಉಲ್ಲೇಖಿಸಿದೆ.

2022ರ ಆಗಸ್ಟ್‌ನಲ್ಲೇ ಕೇಂದ್ರ ಆಹಾರ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಕಲಬೆರಕೆಯನ್ನು ಖಚಿತಪಡಿಸಿತ್ತು. ವೈಜ್ಞಾನಿಕ ಸಾಕ್ಷ್ಯ ಇದ್ದರೂ ಕಲಬೆರಕೆ ತುಪ್ಪದ ಬಳಕೆಗೆ ಅವಕಾಶ ನೀಡಲಾಗಿತ್ತು. 70 ಲಕ್ಷ ಕೆ.ಜಿಗೂ ಹೆಚ್ಚು ತುಪ್ಪವನ್ನು ಅಗತ್ಯ ಪರೀಕ್ಷೆ ನಡೆಸದೆ ಬಳಸಲಾಗಿತ್ತು. ಪ್ರಯೋಗಾಲಯದ ಪರೀಕ್ಷಾ ವರದಿ ಬರುವ ಮೊದಲೇ ಶ್ರೀವಾರಿ ಲಡ್ಡುಪ್ರಸಾದ ತಯಾರಿಸಲು ಕಲಬೆರಕೆ ತುಪ್ಪ ಬಳಸಲಾಗಿತ್ತು ಎಂದು ವರದಿ ಹೇಳಿದೆ.

ಕಪ್ಪುಪಟ್ಟಿಗೆ ಸೇರಿಸಿ: ಸಮಿತಿ ಹೆಸರಿಸಿರುವ ಎಲ್ಲರ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಿ, ಕಠಿಣ ಕ್ರಮ ಜರುಗಿಸಬೇಕು. ಕಲಬೆರಕೆ ತುಪ್ಪ ಪೂರೈಕೆದಾರರನ್ನು ತಕ್ಷಣದಿಂದಲೇ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ತಿರುಪತಿ ಲಡ್ಡು ತಯಾರಿಕೆ ವೇಳೆ ಕಠಿಣವಾದ ಆಹಾರ ಸಂರಕ್ಷಣಾ ನಿಯಮಗಳನ್ನು ಅಳವಡಿಸಿಕೊಳ್ಳುವಂತೆಯೂ ವರದಿಯಲ್ಲಿ ತಿಳಿಸಲಾಗಿದೆ.

ಅಮಾನತು ನಂತರವೂ ಪೂರೈಕೆ: ಕಲಬೆರಕೆ ತುಪ್ಪ ಬಳಕೆ ಪತ್ತೆ ನಂತರ ಪೂರೈಕೆದಾರರನ್ನು ಅಮಾನತು ಮಾಡಿದ ನಂತರವೂ ಅದೇ ಸಂಸ್ಥೆಯಿಂದ ಪೂರೈಕೆ ಮುಂದುವರಿದಿತ್ತು ಎಂದು ಏಕ ಸದಸ್ಯ ಸಮಿತಿ ಆತಂಕ ವ್ಯಕ್ತಪಡಿಸಿದೆ.

ಉತ್ತರಾಖಂಡ ಮೂಲದ ಭೋಲೆ ಬಾಬಾ ಆರ್ಗ್ಯಾನಿಕ್‌ ಡೇರಿ ಮಿಲ್ಕ್‌ ಪ್ರೈವೆಟ್ ಲಿಮಿಟೆಡ್‌ ಅನ್ನು ಗುತ್ತಿಗೆ ಪಡೆದ ಏಳು ತಿಂಗಳಲ್ಲೇ (2021) ಅನರ್ಹ ಎಂದು ಘೋಷಿಸಲಾಗಿತ್ತು. ಆದರೂ ಕಂಪನಿಯು ಸುಮಾರು ಒಂದು ಲಕ್ಷ ಕೆ.ಜಿ.ಯಷ್ಟು ತುಪ್ಪವನ್ನು ಪೂರೈಕೆ ಮಾಡಿದೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

ಟಿಟಿಡಿಯು (ತಿರುಪಡಿ ತಿರುಮಲ ದೇವಸ್ಥಾನ) ಅಮಾನತು ಮಾಡಿದ ನಂತರ ಈ ಕಂಪನಿ ಮೂರು ಮಧ್ಯವರ್ತಿ ಡೇರಿಗಳ (ವೈಷ್ಣವಿ ಡೇರಿ, ಮಾಲ್‌ಗಂಗಾ ಡೇರಿ, ಎ.ಆರ್‌.ಡೇರಿ ಫುಡ್ ಪ್ರೈವೆಟ್ ಲಿಮಿಟೆಡ್‌) ಮೂಲಕ ಪರೋಕ್ಷವಾಗಿ ತುಪ್ಪವನ್ನು ಪೂರೈಸಿದೆ. ಒಂದು ಕೆ.ಜಿ. ತುಪ್ಪದ ಬೆಲೆಯನ್ನು ₹426ರಿಂದ ₹ 294ಕ್ಕೆ ಇಳಿಸಿ ಕಡಿಮೆ ದರಕ್ಕೆ ಪೂರೈಸಲಾಗಿದೆ ಎಂದು ಸಮಿತಿ ಹೇಳಿದೆ.

ಮಧ್ಯವರ್ತಿ ಡೇರಿಗಳಿಗೆ ಅಗತ್ಯ ಪ್ರಮಾಣದ ಉತ್ಪನ್ನ ಪೂರೈಸುವ ಸಾಮರ್ಥ್ಯ ಇಲ್ಲದಿದ್ದರೂ ಅವಕಾಶ ಕಲ್ಪಿಸಲಾಗಿದೆ ಎಂದು ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries