HEALTH TIPS

OPT ವೀಸಾ ವಂಚನೆ ಆರೋಪ: ಭಾರತೀಯರು ಸೇರಿದಂತೆ ಸಾವಿರಾರು ವಿದೇಶಿ ವಿದ್ಯಾರ್ಥಿಗಳಿಗೆ ಸಂಕಷ್ಟ: ಹದ್ದಿನ ಕಣ್ಣಿರಿಸಿದ ICE

 ವಾಶಿಂಗ್ಟನ್:  ಪ್ರಶ್ನಾರ್ಹ ಸಂಸ್ಥೆಗಳಲ್ಲಿ ಉದ್ಯೋಗವನ್ನು ಪಡೆದುಕೊಳ್ಳುವ ಮೂಲಕ ತಮ್ಮ ವೀಸಾದ ಐಚ್ಛಿಕ ಪ್ರಾಯೋಗಿಕ ತರಬೇತಿ (OPT) ನಿಬಂಧನೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿರುವ ಸುಮಾರು 10,000 ವಿದೇಶಿ ವಿದ್ಯಾರ್ಥಿಗಳನ್ನು (ಹಲವಾರು ಭಾರತೀಯರೂ ಸೇರಿದಂತೆ) ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ನಿರ್ದೇಶನಾಲಯ (ICE) ಗುರುತಿಸಿದ್ದು, ಅವರ ಮೇಲೆ ಹದ್ದಿನ ಕಣ್ಣಿರಿಸಿರುವುದಾಗಿ ವರದಿಯಾಗಿದೆ.


ವಿದ್ಯಾರ್ಥಿ ವೀಸಾದಲ್ಲಿ ಅಮೆರಿಕದಲ್ಲಿ ಅಧ್ಯಯನ ನಡೆಸುತ್ತಿರುವ ವಿದೇಶಿ ಪ್ರಜೆಗಳಿಗೆ 12 ತಿಂಗಳವರೆಗೆ ಅಥವಾ ಕೆಲವು ಸಂದರ್ಭಗಳಲ್ಲಿ 24 ತಿಂಗಳವರೆಗೆ ದೇಶದಲ್ಲಿ ಕೆಲಸ ಮಾಡಲು OPT ಅನುಮತಿ ನೀಡುತ್ತದೆ. ಇದು ಉದ್ಯೋಗದಾತ-ಪ್ರಾಯೋಜಿತ ಎಚ್-1ಬಿ ವೀಸಾಗಳಿಗೆ ಪರಿವರ್ತನೆಗೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗವನ್ನು ಒದಗಿಸುತ್ತದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ICI ಪ್ರಭಾರ ನಿರ್ದೇಶಕ ಟಾಡ್ ಲಿಯೋನ್ಸ್, 'OPT' ಯೋಜನೆಯು ವಂಚಕರನ್ನು ಅಯಸ್ಕಾಂತದಂತೆ ಸೆಳೆಯುತ್ತದೆ ಮತ್ತು ಗೃಹ ಭದ್ರತಾ ಇಲಾಖೆಯ ಹಲವು ತನಿಖೆಗಳ ಕೇಂದ್ರಬಿಂದುವಾಗಿತ್ತು. ಬೇಹುಗಾರಿಕೆ, ಜೈವಿಕ ಬೆದರಿಕೆಗಳು, ಬೌದ್ಧಿಕ ಆಸ್ತಿ ಕಳ್ಳತನ, ವೀಸಾ ಮತ್ತು ಉದ್ಯೋಗ ವಂಚನೆ ಹಾಗೂ ವಯಸ್ಸಾದ ಅಮೆರಿಕನ್ನರನ್ನು ಗುರಿಯಾಗಿಸುವ ವಂಚನೆ ಪ್ರಕರಣಗಳನ್ನು ಗುರುತಿಸಲಾಗಿದೆ. ಇವೆಲ್ಲವೂ ತಮ್ಮ 'ವಿದ್ಯಾರ್ಥಿ ಸ್ಥಾನಮಾನವನ್ನು' ದುರುಪಯೋಗಪಡಿಸಿಕೊಳ್ಳುತ್ತಿರುವ ವ್ಯಕ್ತಿಗಳಿಂದ ನಡೆಯುತ್ತಿದೆ. ವಿದೇಶಿ ವಿದ್ಯಾರ್ಥಿ ಕಾರ್ಯಕ್ರಮದಿಂದ ಉಂಟಾಗುವ ಭದ್ರತಾ ಬೆದರಿಕೆಗಳನ್ನು ನಮ್ಮ ರಾಷ್ಟ್ರವು ಸಹಿಸುವುದಿಲ್ಲ' ಎಂದು ಹೇಳಿದ್ದಾರೆ.

ಫೆಡರಲ್ ತನಿಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, OPT ಫಲಾನುಭವಿಗಳನ್ನು ಭಾರತದಲ್ಲಿ ನೆಲೆಸಿರುವ ಉದ್ಯೋಗಿಗಳಿಂದ 'ನಿರ್ವಹಿಸಲಾಗುತ್ತಿರುವ' ಪ್ರಕರಣಗಳನ್ನು ಬಹಿರಂಗಪಡಿಸಿದ್ದಾರೆ. ತರಬೇತಿ ಮತ್ತು ಮೇಲ್ವಿಚಾರಣೆ ಅಮೆರಿಕದೊಳಗೆ ನಡೆಯಬೇಕು ಎಂಬ ನಿಯಮವನ್ನು ಇಲ್ಲಿ ಉಲ್ಲಂಘಿಸಲಾಗಿದೆ ಎಂದು ಲಿಯೋನ್ಸ್ ಹೇಳಿದ್ದಾರೆ.

► ಅಮೆರಿಕನ್ನರ ಸದ್ಭಾವನೆಯ ಮೇಲೆ ದಾಳಿ

ಜಾರ್ಜ್ ಬುಷ್ ಅಧ್ಯಕ್ಷರಾಗಿದ್ದ ಸಂದರ್ಭ ಪರಿಚಯಿಸಲಾದ OPT ಕಾರ್ಯಕ್ರಮವು ಸ್ವದೇಶಕ್ಕೆ ಮರಳುವ ಮುನ್ನ ತಾತ್ಕಾಲಿಕ ಕೆಲಸದ ಅನುಭವ ಪಡೆಯಬಯಸುವ ಅಲ್ಪಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶ ಹೊಂದಿತ್ತು. ಆದರೆ OPT ಅನಿಯಂತ್ರಿತ ಪ್ರಕ್ರಿಯೆಯಾಗಿ ಬೆಳೆಯಿತು ಮತ್ತು ಅಮೆರಿಕದಾದ್ಯಂತ ಸಾವಿರಾರು ವಿದೇಶಿ ವಿದ್ಯಾರ್ಥಿಗಳು ಉದ್ಯೋಗದಲ್ಲಿದ್ದಾರೆ. ಕಾರ್ಯಕ್ರಮ ಬೆಳೆದಂತೆ ವಂಚನೆಯೂ ಬೆಳೆಯಿತು. OPT ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಅಮೆರಿಕ ಜನತೆಯ ಸದ್ಭಾವನೆಯ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಲಿಯೋನ್ಸ್ ಪ್ರತಿಪಾದಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries