HEALTH TIPS

100% eಣhಚಿಟಿoಟನಲ್ಲಿ ಚಲಿಸಬಲ್ಲ ವಾಹನಗಳಿಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

 ನವದೆಹಲಿ: 100 ಪ್ರತಿಶತ ಇಥೆನಾಲ್‌ನಲ್ಲಿ ಚಲಿಸಬಲ್ಲ ವಾಹನಗಳಿಗೆ ಅಗತ್ಯವಾದ ನಿಯಮಾವಳಿಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಇಥೆನಾಲ್‌ ಇಂಧನಕ್ಕೆ ಕಾನೂನು ಮಾನ್ಯತೆ ದೊರೆತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. 


ನಾಗ್ಪುರದಲ್ಲಿ ಕೇಂದ್ರ ಸರಕಾರದ 12 ವರ್ಷಗಳ ಸಾಧನೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, '100 ಪ್ರತಿಶತ ಇಥೆನಾಲ್‌ಗೆ ಸಂಬಂಧಿಸಿದ ನಿಯಮಗಳಿಗೆ ರವಿವಾರ ರಾತ್ರಿ ಸಹಿ ಹಾಕಿದ್ದೇನೆ. ಇದರಿಂದ ಇಥೆನಾಲ್‌ ನಲ್ಲಿ ಮಾತ್ರ ಚಲಿಸುವ ವಾಹನಗಳನ್ನು ದೇಶದಲ್ಲಿ ಉತ್ಪಾದಿಸಿ ಮಾರಾಟ ಮಾಡಲು ದಾರಿ ತೆರೆಯಲಾಗಿದೆ' ಎಂದು ಹೇಳಿದರು.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ದೇಶವನ್ನು ಇಂಧನ ಸ್ವಾವಲಂಬನೆಯತ್ತ ಕೊಂಡೊಯ್ಯುವುದು ಸರಕಾರದ ಉದ್ದೇಶವಾಗಿದೆ. ಇಂಧನ ಆಮದು ವೆಚ್ಚ ತಗ್ಗಿಸುವುದಕ್ಕೂ ಈ ಕ್ರಮ ನೆರವಾಗಲಿದೆ ಎಂದು ಹೇಳಿದರು.

ಪ್ರಸ್ತುತ ದೇಶದ ಬಹುತೇಕ ವಾಹನಗಳು ಸಾಮಾನ್ಯ ಪೆಟ್ರೋಲ್‌ ಅಥವಾ ಕಡಿಮೆ ಪ್ರಮಾಣದ ಇಥೆನಾಲ್‌ ಮಿಶ್ರಿತ ಇಂಧನ ಬಳಕೆಗೆ ಮಾತ್ರ ವಿನ್ಯಾಸಗೊಳಿಸಲಾಗಿವೆ. ಆದ್ದರಿಂದ ಅವು 100 ಪ್ರತಿಶತ ಇಥೆನಾಲ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದರೆ, ಫ್ಲೆಕ್ಸ್‌-ಫ್ಯೂಯಲ್‌ ತಂತ್ರಜ್ಞಾನ ಹೊಂದಿರುವ ಹೊಸ ವಾಹನಗಳು ಹೆಚ್ಚಿನ ಪ್ರಮಾಣದ ಇಥೆನಾಲ್‌ ಬಳಕೆಗೆ ಸೂಕ್ತವಾಗಿರುತ್ತವೆ. ಮಾರುತಿ ಸುಜುಕಿ, ಹೀರೋ ಮೋಟೋಕಾರ್ಪ್‌, ಟೊಯೋಟಾ, ಸುಜುಕಿ ಹಾಗೂ ಹ್ಯುಂಡೈ ಸೇರಿದಂತೆ ಹಲವು ಕಂಪೆನಿಗಳು ಫ್ಲೆಕ್ಸ್‌-ಫ್ಯೂಯಲ್‌ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಮಾರುತಿ ಸುಜುಕಿ ವ್ಯಾಗನಾರ್‌ ಮತ್ತು ಹೀರೋ ಮೋಟೋಕಾರ್ಪ್‌ನ ಕೆಲವು ಮಾದರಿಗಳನ್ನು ಈಗಾಗಲೇ 100 ಪ್ರತಿಶತ ಇಥೆನಾಲ್‌ ಬಳಕೆಗೆ ಹೊಂದುವಂತೆ ಅಭಿವೃದ್ಧಿಪಡಿಸಲಾಗಿದೆ ಎಂದು ಗಡ್ಕರಿ ಹೇಳಿದರು.

'ಮುಂದಿನ ಎರಡು ತಿಂಗಳಲ್ಲಿ ಟೊಯೋಟಾ, ಸುಝುಕಿ ಹಾಗೂ ಹ್ಯುಂಡೈ ಕಂಪೆನಿಗಳು 100 ಪ್ರತಿಶತ ಇಥೆನಾಲ್‌ನಲ್ಲಿ ಚಲಿಸಬಲ್ಲ ವಾಹನಗಳನ್ನು ಬಿಡುಗಡೆ ಮಾಡಲಿವೆ' ಎಂದರು.

ಇಥೆನಾಲ್‌ ನವೀಕರಿಸಬಹುದಾದ ಜೈವಿಕ ಇಂಧನವಾಗಿದ್ದು, ಮುಖ್ಯವಾಗಿ ಕಬ್ಬು, ಜೋಳ ಹಾಗೂ ಇತರ ಕೃಷಿ ಉತ್ಪನ್ನಗಳಿಂದ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಹೆಚ್ಚಿನ ಪ್ರಮಾಣದ ಇಥೆನಾಲ್‌ ಅನ್ನು ಕಬ್ಬಿನ ಉಪ ಉತ್ಪನ್ನವಾದ ಮೊಲಾಸಿಸ್‌ನಿಂದ ತಯಾರಿಸಲಾಗುತ್ತಿದೆ ಎಂದು ಹೇಳಿದರು.

ದೇಶವು ವರ್ಷಕ್ಕೆ ಸುಮಾರು 22 ಲಕ್ಷ ಕೋಟಿ ರೂ. ಮೌಲ್ಯದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಇಥೆನಾಲ್‌ ಬಳಕೆ ಹೆಚ್ಚುವುದರಿಂದ ಆಮದು ಪ್ರಮಾಣ ಕಡಿಮೆಯಾಗುವ ಜೊತೆಗೆ, ಜೈವಿಕ ಇಂಧನ ಉದ್ಯಮದ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ. ಇದಲ್ಲದೆ, ಇಥೆನಾಲ್‌ ಉತ್ಪಾದನೆಗೆ ಅಗತ್ಯವಾದ ಕೃಷಿ ಉತ್ಪನ್ನಗಳನ್ನು ಬೆಳೆಯುವ ರೈತರಿಗೆ ಹೆಚ್ಚುವರಿ ಆದಾಯವೂ ದೊರೆಯಲಿದೆ. 









 ಎಂದು ಗಡ್ಕರಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries