HEALTH TIPS

ಸರ್ಕಾರಿ ಅಧಿಕಾರಿ ಹೆಸರಲ್ಲಿ 20 ನಿವೇಶನ: ಮನೆಯಲ್ಲಿ ದುಡ್ಡು, ಚಿನ್ನದ ಭಂಡಾರ


 ಭುವನೇಶ್ವರ: ಕೆಲ ಸರ್ಕಾರಿ ಅಧಿಕಾರಿಗಳ ಭ್ರಷ್ಟತನಕ್ಕೆ ಮಿತಿಯೇ ಇಲ್ಲ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಒಡಿಶಾ ಸರ್ಕಾರದ ಅಡಿಯಲ್ಲಿ ಬರುವ ವೀರ್ ಸುರೇಂದ್ರ ಸಾಯಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್(ವಿಐಎಂಎಸ್‌ಎಆರ್) ಸಂಸ್ಥೆಯ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ವಿಚಕ್ಷಣಾ ದಳದ ಅಧಿಕಾರಿಗಳು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. 

ಹೌದು, ಅಧಿಕಾರಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ 20 ನಿವೇಶನ ಮತ್ತು 2 ಕಟ್ಟಡಗಳಿರುವುದು ಕಂಡುಬಂದಿದೆ.

ಆಸ್ಪತ್ರೆಯ ಸೂಪರಿಂಟೆಂಡೆಂಟ್ ಕಚೇರಿಯ ಸ್ಥಾಪನಾ ಅಧಿಕಾರಿ ಧನುರ್ಧರ್ ಬಿಸ್ವಾಲ್ ಅವರ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಅಧಿಕಾರಿ ತಮ್ಮ ಆದಾಯಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂಬ ಆರೋಪದ ನಂತರ ಈ ದಾಳಿ ನಡೆಸಲಾಗಿದೆ.

ದಾಳಿಯ ಸಮಯದಲ್ಲಿ, ಸಂಬಲ್ಪುರ ಪಟ್ಟಣದ ಹೊರವಲಯದಲ್ಲಿ 20 ದುಬಾರಿ ಬೆಲೆಯ ನಿವೇಶನ, ಒಂದು ಬಹುಮಹಡಿ ಕಟ್ಟಡ ಸೇರಿದಂತೆ ಎರಡು ಕಟ್ಟಡಗಳು, ₹19.72 ಲಕ್ಷ ನಗದು, ಒಂದು ಟ್ರಕ್, ನಾಲ್ಕು ಚಕ್ರದ ವಾಹನ, ಎರಡು ಟ್ರ್ಯಾಕ್ಟರ್‌ಗಳು ಮತ್ತು ಚಿನ್ನದ ಆಭರಣಗಳನ್ನು ವಿಚಕ್ಷಣಾ ದಳದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಇಬ್ಬರು ಡಿಎಸ್‌ಪಿಗಳು, ಐವರು ಇನ್ಸ್‌ಪೆಕ್ಟರ್‌ಗಳು, ಮೂವರು ಎಎಸ್‌ಐ ಮತ್ತು ಇತರೆ ಸಹಾಯಕ ಸಿಬ್ಬಂದಿ ಈ ದಾಳಿ ನಡೆಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries