HEALTH TIPS

PM ಕಿಸಾನ್‌ ಯೋಜನೆಯಡಿ ಖಾತೆಗೆ 1 ಪೈಸೆ ಜಮೆ: ಮೊಬೈಲ್‌ ಸಂದೇಶ ನೋಡಿ ದಂಗಾದ ಕುಟಂಬ

 ಮುಂಬೈ: ರೈತರ ಖಾತೆಗಳಿಗೆ ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯಡಿ 23ನೇ ಕಂತಿನ ಹಣ ಪಾವತಿಯಾಗಿದೆ. ಆದರೆ ಮಹಾರಾಷ್ಟ್ರದ ರೈತ ಮಹಿಳೆಯೊಬ್ಬರ ಮೊಬೈಲ್‌ಗೆ ಖಾತೆಗೆ 1 ಪೈಸೆ ಪಾವತಿಯಾಗಿದೆ ಎಂಬ ಸಂದೇಶ ಬಂದಿದೆ. 


ಬಾಂದ್ರಾ ಜಿಲ್ಲೆಯ ಜೀವನಾಲಾ ಎನ್ನುವ ಗ್ರಾಮದ 65 ವರ್ಷದ ಲಕ್ಷ್ಮಿಬಾಯಿ ಎನ್ನುವವರ ಖಾತೆಗೆ ಕೇವಲ 1 ಪೈಸೆ ಪಾವತಿಯಾಗಿರುವ ಸಂದೇಶ ಬಂದಿದೆ.

ಇದನ್ನು ನೋಡಿ ಲಕ್ಷ್ಮಿಬಾಯಿ ಕುಟುಂಬ ಗಾಬರಿಯಾಗಿದೆ.

ಲಕ್ಷ್ಮಿಬಾಯಿ ಅವರ ಪುತ್ರ ಖೆಮರಾಜ್ ಗಿರೆಪುಂಜೆ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕುಟುಂಬ ₹2 ಸಾವಿರ ಹಣದ ನಿರೀಕ್ಷೆಯಲ್ಲಿತ್ತು, ಆದರೆ ಕೇವಲ 1 ಪೈಸೆ ಪಾವತಿಯಾಗಿದೆ ಎಂದು ಸಂದೇಶ ಬಂದಿದೆ ಎಂದಿದ್ದಾರೆ. ಖಾರಿಫ್ ಬಿತ್ತನೆ ಋತು ಆರಂಭವಾಗುತ್ತಿದೆ ಈಗ ಬೀಜ ಮತ್ತು ರಸಗೊಬ್ಬರಗಳಿಗೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಅಲವತ್ತುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದಿದ್ದಾರೆ.

ಬಾಂದ್ರಾ ಜಿಲ್ಲೆಯ ಕೃಷಿ ಅಧಿಕಾರಿ ಸಂಗೀತಾ ಮಾನೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾಂತ್ರಿಕ ದೋಷದಿಂದ ಅವರಿಗೆ ತಪ್ಪಾದ ಸಂದೇಶ ಹೋಗಿದೆ. ದಾಖಲೆ ಪ್ರಕಾರ ಪಲಾನುಭವಿ ಖಾತೆಗೆ ₹2 ಸಾವಿರ ಪಾವತಿಯಾಗಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರವು ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರ್ಷದಲ್ಲಿ ಮೂರು ಕಂತಿನಲ್ಲಿ ನೀಡುವ ಪಿಎಂ ಕಿಸಾನ್‌ ಯೋಜನೆಯ 23ನೇ ಕಂತು ಜೂನ್‌ 20ರಂದು ಜಮೆಯಾಗಿದೆ.

ಯೋಜನೆ ಅಡಿಯಲ್ಲಿ ದೇಶದಾದ್ಯಂತ 9.44 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಸುಮಾರು ₹18,880 ಕೋಟಿ ತಲುಪಲಿದೆ ಎಂದು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries