HEALTH TIPS

ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: 3 ತಾಸು AC ಇಲ್ಲದೆ ಪರದಾಡಿದ ಪ್ರಯಾಣಿಕರು

 ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಂಚಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ಪ್ರಯಾಣಿಕರು ವಿಮಾನದೊಳಗೆ ಸುಮಾರು 3 ಗಂಟೆಗಳ ಕಾಲ ಹವಾ ನಿಯಂತ್ರಣ (ಎ ಸಿ) ಇಲ್ಲದೆ ಪರದಾಡುವಂತಾಯಿತು. 


ಇಂಡಿಗೋ 6ಇ-2614 ವಿಮಾನವು ದೆಹಲಿಯಿಂದ ರಾಂಚಿಗೆ ಹೊರಡಲು ಸಿದ್ಧವಾಗಿತ್ತು. ಆದರೆ ಟೇಕ್-ಆಫ್ ಆಗುವ ಮೊದಲು ತಾಂತ್ರಿಕ ದೋಷ ಪತ್ತೆಯಾದ ಕಾರಣ, ವಿಮಾನ ಹಾರಾಟ ವಿಳಂಬವಾಗಿದೆ.

ಈ ಅವಧಿಯಲ್ಲಿ 170 ಪ್ರಯಾಣಿಕರನ್ನು ಸುಮಾರು 2 ರಿಂದ 3 ತಾಸು ವಿಮಾನದೊಳಗೆ ಕೂರಿಸಲಾಗಿತ್ತು. ವಿಮಾನದ ಬಾಗಿಲು ಮುಚ್ಚಿದ್ದರಿಂದ ಮತ್ತು ಹವಾನಿಯಂತ್ರಣ ಕಾರ್ಯನಿರ್ವಹಿಸದ ಕಾರಣ ಪ್ರಯಾಣಿಕರು ಉಸಿರುಗಟ್ಟುವ ವಾತಾವರಣ ಎದುರಿಸಬೇಕಾಯಿತು. ರಾತ್ರಿ 11:20ಕ್ಕೆ ಪ್ರಯಾಣಿಕರನ್ನು ವಿಮಾನದಿಂದ ಇಳಿಯಲು ಸೂಚಿಸಲಾಯಿತು.

'ವಿಮಾನದ ಬಾಗಿಲು ಮುಚ್ಚಿ, ಗಾಳಿಯಾಡದ ಸ್ಥಿತಿಯಲ್ಲಿ 2 ರಿಂದ 3 ಗಂಟೆ ಒಳಗೆ ಕೂರಿಸಿದ್ದರು. ಇದು ಅಮಾನವೀಯ' ಎಂದು ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗದ್ದಲ ಉಂಟುಮಾಡಿದ ನಂತರ, ಇಂಡಿಗೋ ಆಡಳಿತ ಮಂಡಳಿಯು ತಕ್ಷಣ ಕಾರ್ಯಪ್ರವೃತ್ತರಾಗಿ ವಿಮಾನದ ಬಾಗಿಲುಗಳನ್ನು ತೆರೆಯಿತು.

ಎಲ್ಲಾ ಪ್ರಯಾಣಿಕರನ್ನು ಶಟಲ್ ಬಸ್‌ಗಳ ಮೂಲಕ ಸುರಕ್ಷಿತವಾಗಿ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಮರಳಿ ಕರೆತರಲಾಗಿತ್ತು.

'ತಾಂತ್ರಿಕ ದೋಷದ ಕಾರಣ ವಿಳಂಬವಾಯಿತು' ಎಂದು ಇಂಡಿಗೋ ಸ್ಪಷ್ಟಪಡಿಸಿದೆ. 'ವಿಮಾನದ ಎ ಸಿ, ಎಂಜಿನ್‌ನಿಂದ ಕಾರ್ಯನಿರ್ವಹಿಸುತ್ತದೆ. ಟೇಕ್ ಆಫ್ ಆದ ನಂತರವೇ ಎ ಸಿ ಕೆಲಸ ಮಾಡುತ್ತದೆ' ಎಂದು ಸಂಸ್ಥೆ ತಿಳಿಸಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries