HEALTH TIPS

ಅಮೆರಿಕ-ಇರಾನ್ ಒಪ್ಪಂದ: 300 ಬಿಲಿಯನ್ ಡಾಲರ್ ಖಾಸಗಿ ಹೂಡಿಕೆ ನಿಧಿ ಪ್ರಸ್ತಾವನೆ

 ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಒಪ್ಪಂದದ ಭಾಗವಾಗಿ 300 ಬಿಲಿಯನ್ ಡಾಲರ್ (ಸುಮಾರು ₹28.31 ಲಕ್ಷ ಕೋಟಿ) ಮೌಲ್ಯದ ಖಾಸಗಿ ಹೂಡಿಕೆ ನಿಧಿಯ ಪ್ರಸ್ತಾವನೆ ರೂಪಿಸಲಾಗಿದೆ ಎಂದು ವರದಿಯಾಗಿದೆ. 


300 ಬಿಲಿಯನ್‌ ಡಾಲರ್‌ ಮೊತ್ತದಲ್ಲಿ ಅರ್ಧದಷ್ಟು ಮೊತ್ತವನ್ನು ಈಗಾಗಲೇ ಇರಾನ್‌ಗೆ ನೀಡಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದು ವಿವಿಧ ದೇಶಗಳ ಖಾಸಗಿ ಕಂಪನಿಗಳು ಇರಾನ್‌ನಲ್ಲಿ ಹೂಡಿಕೆ ಮಾಡುವ ಮೊತ್ತ ಎಂದೂ ವರದಿಯಾಗಿವೆ.

ಅಮೆರಿಕ ಮತ್ತು ಇರಾನ್ ಶುಕ್ರವಾರ (ಜೂನ್ 19) ಈ ಒಪ್ಪಂದಕ್ಕೆ ಸಹಿ ಹಾಕಲಿವೆ. ಯುದ್ಧವನ್ನು ಕೊನೆಗೊಳಿಸಲು ಮತ್ತು ಎರಡೂ ದೇಶಗಳಿಗೆ ಆರ್ಥಿಕ ಲಾಭವಾಗುವಂತೆ ಈ ನಿಧಿಯ ಪ್ರಸ್ತಾವನೆ ರೂಪಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ನಿಧಿಯಲ್ಲಿ ಅಮೆರಿಕ ಸರ್ಕಾರದ ಹಣ ಅಥವಾ ಅನುದಾನ ಇರುವುದಿಲ್ಲ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಹಣದ ಹೂಡಿಕೆಗೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

'ಅಮೆರಿಕ, ಅರಬ್‌ ದೇಶಗಳು, ದಕ್ಷಿಣ ಅಮೆರಿಕ, ಆಫ್ರಿಕಾ, ದಕ್ಷಿಣ ಕೊರಿಯಾ, ಜಪಾನ್, ಸಿಂಗಪುರದ ಕಂಪನಿಗಳು ಇರಾನ್‌ನಲ್ಲಿ ಹೂಡಿಕೆ ಮಾಡಲು ಒಪ್ಪಿಕೊಂಡಿವೆ. ಇಂಧನ, ಸಾರಿಗೆ, ತಯಾರಿಕೆ ಕ್ಷೇತ್ರಗಳಲ್ಲಿ ಹೂಡಿಕೆ ನಡೆಯಲಿದೆ.

ಬುಧವಾರ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗಲ್ಫ್ ದೇಶಗಳು, ಏಷ್ಯಾ ಮತ್ತು ದಕ್ಷಿಣ ಅಮೆರಿಕದ ಖಾಸಗಿ ಕಂಪನಿಗಳು ಇರಾನ್‌ನಲ್ಲಿ ಇಂಧನ, ಸಾರಿಗೆ ಮತ್ತು ಉತ್ಪಾದನಾ ವಲಯಗಳಲ್ಲಿ ಹೂಡಿಕೆ ಮಾಡಲು ಒಪ್ಪಿಕೊಂಡಿವೆ. ಆದರೆ ನಾವು ಇದರಲ್ಲಿ ಒಂದು ಪೈಸೆ ಹಣವನ್ನೂ ಹೂಡಿಕೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್ ತನ್ನ ಪರಮಾಣು ಯೋಜನೆಯನ್ನು ನಿಲ್ಲಿಸಿ, ಒಪ್ಪಂದದ ನಿಯಮಗಳನ್ನು ಪಾಲಿಸಿದರೆ ಮಾತ್ರ ಈ ನಿಧಿಯ ಲಾಭ ಸಿಗಲಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಿಳಿಸಿದ್ದಾರೆ.

ಅಮೆರಿಕದ ಸರಣಿ ನಿರ್ಬಂಧಗಳಿಂದಾಗಿ ಕಳೆದ 40 ವರ್ಷಗಳಿಂದ ಇರಾನ್‌ಗೆ ಯಾವುದೇ ವಿದೇಶಿ ಹೂಡಿಕೆ ಬಂದಿರಲಿಲ್ಲ. ಆದಾಗ್ಯೂ ಈ ಹೂಡಿಕೆ ನಿಧಿ ಅಂತಿಮ ಶಾಂತಿ ಒಪ್ಪಂದಕ್ಕೆ ಸಹಿ ಆದ ಬಳಿಕ ಮಾತ್ರ ಕಾರ್ಯರೂಪಕ್ಕೆ ಬರಲಿದೆ ಮೂಲಗಳ ಹೇಳಿವೆ.

ಆಧಾರ: ರಾಯಿಟರ್ಸ್‌






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries