HEALTH TIPS

ತಾಯಿಯ ಭಾವಚಿತ್ರವಿರುವ ಸ್ಕರ್ಟ್ ಧರಿಸಿ ಗಮನ ಸೆಳೆದ ಬರಾಕ್ ಒಬಾಮ ಪತ್ನಿ ಮಿಶೆಲ್

 ಚಿಕಾಗೊ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಪತ್ನಿ ಮಿಶೆಲ್ ಒಬಾಮಾ ಅವರು ಇತ್ತೀಚೆಗೆ ತಮ್ಮ ದಿವಂಗತ ತಾಯಿಗೆ ಅತ್ಯಂತ ಭಾವುಕ ಹಾಗೂ ವಿಶೇಷ ಗೌರವ ಸಲ್ಲಿಸಿದ್ದಾರೆ. 


ಚಿಕಾಗೊದಲ್ಲಿ ನಡೆದ ಒಬಾಮ ಪ್ರೆಸಿಡೆನ್ಶಿಯಲ್ ಸೆಂಟರ್ ಕಾರ್ಯಕ್ರಮವೊಂದರಲ್ಲಿ, ಅವರು ತಮ್ಮ ತಾಯಿಯ ಭಾವಚಿತ್ರವಿರುವ ವಿಶೇಷವಾದ ಸ್ಕರ್ಟ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಆಕ್ನೆ ಸ್ಟುಡಿಯೋಸ್ ಬ್ರ್ಯಾಂಡ್ ವಿಶೇಷವಾಗಿ ವಿನ್ಯಾಸಗೊಳಿಸಿರುವ ಸ್ಕರ್ಟ್ ಇದಾಗಿದೆ. ಸ್ಕರ್ಟ್ ಮೇಲೆ ಮೈಕಲ್ ಅವರ ತಾಯಿ ಮರಿಯನ್ ಶೀಲ್ಡ್ ರಾಬಿನ್‌ಸನ್ ಅವರ ಸುಂದರವಾದ ಕಪ್ಪು ಬಿಳುಪು ಭಾವಚಿತ್ರವನ್ನು ಮುದ್ರಿಸಲಾಗಿದೆ.

ಮಿಶೆಲ್ ಅವರಿಗೆ ತಮ್ಮ ತಾಯಿಯ ಫೋಟೋಗಳಲ್ಲಿ ಇದು ಅತ್ಯಂತ ಪ್ರೀತಿಯ ಚಿತ್ರವಾಗಿತ್ತಂತೆ.

2024ರಲ್ಲಿ ಮಿಶೆಲ್ ಅವರ ತಾಯಿ ಮೇರಿಯನ್‌ ನಿಧನರಾದರು. ಒಬಾಮ ಅವರು ಅಮೆರಿಕದ ಅಧ್ಯಕ್ಷರಾಗಿದ್ದ 8 ವರ್ಷ ಮೇರಿಯನ್ ಅವರು ಶ್ವೇತಭವನದಲ್ಲಿಯೇ ಇದ್ದರು. ತಮ್ಮ ಮೊಮ್ಮಕ್ಕಳಾದ ಮಲಿಯಾ ಮತ್ತು ಸಶಾ (ಮಿಶೆಲ್ ಒಬಾಮ ಅವರ ಹೆಣ್ಣುಮಕ್ಕಳು) ನೋಡಿಕೊಳ್ಳುವ ಸಲುವಾಗಿ 2009ರಲ್ಲಿ ಶ್ವೇತ ಭವನಕ್ಕೆ ಬಂದಿದ್ದರು.

ಚಿಕಾಗೊ ಮೂಲದವರಾಗಿದ್ದರೂ, ಮಿಶೆಲ್‌ ಮತ್ತು ಒಬಾಮ ಜತೆಗೇ ಇದ್ದರು. ಇತ್ತೀಚೆಗೆ ಚಿಕಾಗೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಶೆಲ್‌ ಅಮ್ಮನ ಫೋಟೊ ಇರುವ ಉಡುಗೆ ತೊಟ್ಟಿರುವುದು ನೆರೆದವರನ್ನು ಆಕರ್ಷಿಸಿತ್ತು.

ಮಿಶೆಲ್ ಅವರು ವೇದಿಕೆಗೆ ಬರುತ್ತಿದ್ದಂತೆ, ಅವರ ಉಡುಗೆಯನ್ನು ಕಂಡು ಬರಾಕ್ ಒಬಾಮ ಭಾವುಕರಾಗಿದ್ದಾರೆ. 'ನನ್ನ ಪತಿಗೆ ಚೇತರಿಸಿಕೊಳ್ಳಲು ಸಮಯ ನೀಡಿ. ನನ್ನ ಉಡುಗೆಯಲ್ಲಿ ಅಮ್ಮನ ನನ್ನಿಷ್ಟದ ಫೋಟೊವಿಟ್ಟು ವಿನ್ಯಾಸ ಮಾಡಿರುವುದು ಅವರಿಗೂ ಈಗಲೇ ತಿಳಿಯಿತು' ಎಂದಿದ್ದಾರೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries