ನವದೆಹಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ ಬರುವಂತೆ 42 ರೂ. ಏರಿಕೆ ಮಾಡಲಾಗಿದೆ.
ಈ ಬೆಲೆ ಏರಿಕೆಯಿಂದಾಗಿ ದಿಲ್ಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 3,113.50 ರೂ.ಗೆ ಏರಿಕೆಯಾಗಿದೆ ಎಂದು ಉದ್ಯಮ ಮೂಲಗಳನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ, ಸ್ಥಳೀಯ ತೆರಿಗೆಗಳು ಸೇರಿ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 53.50 ಏರಿಕೆಯಾಗಿದ್ದು, ಒಟ್ಟು ಬೆಲೆ 3,255.50 ರೂ.ಗೆ ತಲುಪಿದೆ.
5 ಕೆಜಿ ಎಫ್ಟಿಎಲ್ ಸಿಲಿಂಡರ್ ಬೆಲೆಯನ್ನು 11 ರೂ. ಏರಿಕೆ ಮಾಡಲಾಗಿದ್ದು, ದಿಲ್ಲಿಯಲ್ಲಿ ಅದರ ದರ 821.50 ರೂ.ಗೆ ತಲುಪಿದೆ.
ಜನವರಿಯಲ್ಲಿ 19 ಕೆಜಿ ತೂಕದ ಸಿಲಿಂಡರ್ ದರ ದಿಲ್ಲಿಯಲ್ಲಿ 1,691.50 ಇತ್ತು. ಆದರೆ, ಪದೇ ಪದೇ ದರ ಪರಿಷ್ಕರಣೆ ಮಾಡಿದ್ದರಿಂದಾಗಿ ಅದರ ದರ 3,113.50 ರೂ.ಗೆ ತಲುಪಿದೆ.

