2016ರ ಮೇನಲ್ಲಿ ಆರಂಭಿಸಲಾದ ಈ ಪ್ರಮುಖ ಯೋಜನೆಯಡಿ ಫಲಾನುಭವಿಗಳು ಪ್ರತಿ ವರ್ಷ 14.2 ಕೆ.ಜಿ.ನ 12 ರಿಯಾಯಿತಿ ದರದ LPG ಸಿಲಿಂಡರ್ಗಳನ್ನು ಪಡೆಯಲು ಅರ್ಹರಾಗಿದ್ದರು. ಕಳೆದ ವರ್ಷ ಈ ಕೋಟಾವನ್ನು 9 ಸಿಲಿಂಡರ್ ಗಳಿಗೆ ಇಳಿಸಲಾಗಿತ್ತು. ಈಗ ಅದನ್ನು ಮತ್ತಷ್ಟು ಕಡಿತಗೊಳಿಸಿ ನಾಲ್ಕಕ್ಕೆ ಸೀಮಿತಗೊಳಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖಾನೂಜಾ, ಪರಿಷ್ಕೃತ ಅರ್ಹತೆಯು ಉಜ್ವಲ ಫಲಾನುಭವಿಗಳ ಸರಾಸರಿ ವಾರ್ಷಿಕ ಬಳಕೆಯನ್ನು ಬಿಂಬಿಸುತ್ತದೆ ಎಂದು ಹೇಳಿದ್ದಾರೆ.

