ಇಂಫಾಲ್: ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ಶಸ್ತ್ರ ಸಜ್ಜಿತ ಗುಂಪು ಅಪಹರಿಸಿದ್ದ 14 ಕುಕಿ ಸಮುದಾಯದ ವ್ಯಕ್ತಿಗಳನ್ನು ಸುಮಾರು ಒಂದು ತಿಂಗಳ ನಂತರ ಮಂಗಳವಾರ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಹೊಂಚು ಹಾಕಿ ಮೂವರು ಚರ್ಚ್ ನಾಯಕರ ಹತ್ಯೆ ನಡೆಸಿದ ನಂತರ, ಮೇ 13ರಂದು ಅವರನ್ನು ಅಪಹರಿಸಲಾಗಿತ್ತು.
'ಎಲ್ಲರನ್ನೂ ಸೇನಾಪತಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು' ಎಂದು ಅಧಿಕಾರಿ ಹೇಳಿದ್ದಾರೆ.

