ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ದೊಡ್ಡ ಕಂಪನಿ ಆಂಥ್ರೊಪಿಕ್, ತನ್ನ ನೂತನ 'ಕ್ಲಾಡ್ ಫೇಬಲ್ 5' ಮತ್ತು 'ಕ್ಲಾಡ್ ಮೈಥೋಸ್ 5' ಎಐ ಮಾದರಿಗಳ ಬಳಕೆಯನ್ನು ಜಗತ್ತಿನಾದ್ಯಂತ ಇರುವ ತನ್ನ ಗ್ರಾಹಕರಿಗೆ ದಿಢೀರ್ ಆಗಿ ಸ್ಥಗಿತಗೊಳಿಸಿದೆ.
'ಇವು ಜಗತ್ತಿನಲ್ಲಿಯೇ ಅತ್ಯಂತ ಶಕ್ತಿಯುತ ಎಐ ಮಾದರಿಗಳು' ಎಂದು ಕಂಪನಿಯು ಘೋಷಿಸಿಕೊಂಡಿತ್ತು.
'ಕ್ಲಾಡ್ ಮೈಥೋಸ್' ಮಾದರಿಯಲ್ಲಿ ಸಮಸ್ಯೆ ಇರುವ ಬಗ್ಗೆ ಭಾರತ ಸರ್ಕಾರವು ಕಳವಳ ವ್ಯಕ್ತಪಡಿಸಿತ್ತು. ಈ ಬಳಿಕ ಅಮೆರಿಕ ಸರ್ಕಾರ ಈ ಸೂಚನೆ ನೀಡಿದೆ.
'ಈ ಎಐ ಮಾದರಿಗಳ ಬಳಕೆಯನ್ನು ರದ್ದು ಮಾಡಲು ನಿರ್ದಿಷ್ಟ ಕಾರಣವನ್ನು ಸರ್ಕಾರ ನೀಡಿಲ್ಲ. ಆದರೆ, ಸೈಬರ್ ದಾಳಿ ತಡೆಯಬಲ್ಲ ಪ್ರಬಲ ವ್ಯವಸ್ಥೆಯನ್ನೂ ಬೇಧಿಸಿ ಎಲ್ಲ ದತ್ತಾಂಶಗಳನ್ನು ಸುಲಭವಾಗಿ ಪಡೆದುಕೊಳ್ಳುವ ಸಾಮರ್ಥ್ಯವು ಈ ಮಾದರಿಗಳಿಗೆ ಇರುವುದು ಸರ್ಕಾರಕ್ಕೆ ಗೊತ್ತಾಗಿರಬಹುದು' ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

