HEALTH TIPS

ಯುದ್ಧ ಕೊನೆಗಾಣಿಸಲು ಇದು ಸೂಕ್ತ ಸಮಯ: ನೆತನ್ಯಾಹುಗೆ ತಿಳಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇರಾನ್ ಜೊತೆಗಿನ ಶಾಂತಿ ಒಪ್ಪಂದಕ್ಕೆ ಕೆಲವೇ ದಿನಗಳಲ್ಲಿ ಸಹಿ ಹಾಕಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತಿಳಿಸಿದ್ದಾರೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ 'ಆಕ್ಸಿಯೋಸ್' ವರದಿ ಮಾಡಿದೆ.

`ಇದು ಅತ್ಯುತ್ತಮ ಒಪ್ಪಂದವಾಗಿದೆ. ಈ ಯುದ್ಧವನ್ನು ಕೊನೆಗಾಣಿಸಲು ಈಗ ಸೂಕ್ತ ಸಮಯ ಬಂದಿದೆ' ಎಂದು ಟ್ರಂಪ್ ಅವರು ನೆತನ್ಯಾಹು ಅವರೊಂದಿಗೆ ನಡೆಸಿದ ದೂರವಾಣಿ ಕರೆಯ ವೇಳೆ ತಿಳಿಸಿದ್ದಾರೆ. ಮಾತುಕತೆಯ ವೇಳೆ ನೆತನ್ಯಾಹು `ಇರಾನ್‍ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಆತಂಕಗಳನ್ನು ಅಂತಿಮ ಒಪ್ಪಂದದಲ್ಲಿ ಪರಿಹರಿಸಲಾಗುವುದು ಎಂಬ ಬಗ್ಗೆ ನಂಬಿಕೆಯಿದೆ" ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಯು ನೆತನ್ಯಾಹು ಅವರ ಹಿಂದಿನ ನಿಲುವಿಗಿಂತ ಸಂಪೂರ್ಣ ಭಿನ್ನವಾಗಿದೆ. ಸಂಘರ್ಷದ ಆರಂಭದಿಂದಲೂ, ಈ ಯುದ್ಧವು ಇರಾನ್‍ನಲ್ಲಿ ಆಡಳಿತ ಬದಲಾವಣೆಗೆ ಸಹಾಯ ಮಾಡುತ್ತದೆ ಎಂದು ಅವರು ವಾದಿಸುತ್ತಿದ್ದರು.

ಟ್ರಂಪ್ ಅವರು ಅಮೆರಿಕದ ಹಿತಾಸಕ್ತಿಗಳ ಆಧಾರದ ಮೇಲೆ ಒಪ್ಪಂದವನ್ನು ಮುಂದುವರಿಸುತ್ತಿದ್ದಾರೆ. ಆದರೆ ಇರಾನ್‍ನ ಪರಮಾಣು ಕಾರ್ಯಕ್ರಮ, ಕ್ಷಿಪಣಿಗಳಿಗೆ ಸಂಬಂಧಿಸಿದಂತೆ ಇಸ್ರೇಲ್ ಮತ್ತು ಅಮೆರಿಕದ ಜಂಟಿ ನಿಲುವನ್ನು ರಕ್ಷಿಸಲಾಗುವುದು ಎಂದು ಇಸ್ರೇಲ್ ನಿರೀಕ್ಷಿಸುತ್ತದೆ.

ಅಲ್ಲದೆ, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯಲು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಇಸ್ರೇಲ್ ಹೊಂದಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್‌ ಹೇಳಿದ್ದಾರೆ. ಲೆಬನಾನ್ ಅನ್ನು ಒಳಗೊಂಡಿರುವ ಕದನ ವಿರಾಮ ಒಪ್ಪಂದವು ಭವಿಷ್ಯದಲ್ಲಿ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ನಡೆಸಬಹುದಾದ ಕಾರ್ಯಾಚರಣೆಗಳಿಗೆ ಮಿತಿ ಹೇರಬಹುದು ಎಂಬ ಆತಂಕವೂ ಇಸ್ರೇಲ್‌ ಅಧಿಕಾರಿಗಳಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries