HEALTH TIPS

ಭಾರತ್ ಟ್ಯಾಕ್ಸಿ ಸೇವೆ 500 ನಗರಗಳಿಗೆ ವಿಸ್ತರಣೆ: ಅಮಿತ್ ಶಾ

ಗಾಂಧಿನಗರ (PTI): ಭಾರತ್‌ ಟ್ಯಾಕ್ಸಿ ಸೇವೆಯನ್ನು ಮುಂದಿನ ಎರಡು ವರ್ಷಗಳಲ್ಲಿ 500ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

ಗುಜರಾತ್‌ನ 14 ನಗರಗಳಲ್ಲಿ ಭಾರತ್ ಟ್ಯಾಕ್ಸಿ ಸೇವೆಗಳಿಗೆ ಅವರು ಚಾಲನೆ ನೀಡಿ ಮಾತನಾಡಿದರು.

'ಭಾರತ್‌ ಟ್ಯಾಕ್ಸಿ' ಸಹಕಾರ ತತ್ವದ ಆಧಾರದಲ್ಲಿ ಆಯಪ್‌ ಮೂಲಕ ಟ್ಯಾಕ್ಸಿ ಸೇವೆ ಒದಗಿಸುವ ಮತ್ತು ಚಾಲಕರ ಮಾಲೀಕತ್ವದ ಅತಿದೊಡ್ಡ ವೇದಿಕೆ ಆಗಿದೆ.

'ಮುಂದಿನ ಎರಡು ವರ್ಷಗಳಲ್ಲಿ ನಾಗ್ಪುರ, ಪುಣೆ, ಮುಂಬೈ, ಲಖನೌ, ಚಂಡೀಗಢ, ಜೈಪುರ ಮತ್ತು ಕೋಲ್ಕತ್ತ ಸೇರಿದಂತೆ 500ಕ್ಕೂ ಅಧಿಕ ನಗರಗಳಿಗೆ ಭಾರತ್‌ ಟ್ಯಾಕ್ಸಿ ಸೇವೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ' ಎಂದು ಶಾ ತಿಳಿಸಿದರು.

'ಭಾರತ್‌ ಟ್ಯಾಕ್ಸಿ' ವೇದಿಕೆ ಸೇರಿಕೊಂಡಿರುವ ಟ್ಯಾಕ್ಸಿ ಚಾಲಕರು ಇನ್ನು ಮುಂದೆ ಕೇವಲ ಚಾಲಕರಾಗಿ ಇರುವುದಿಲ್ಲ. ಅವರು 'ಸಾರಥಿಗಳು' ಮತ್ತು ಸಹ-ಮಾಲೀಕರಾಗಿದ್ದಾರೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries