HEALTH TIPS

ಈ ಶೈಕ್ಷಣಿಕ ವರ್ಷದಿಂದ 6, 9ನೇ ತರಗತಿಗಳಲ್ಲಿ ಸಂಸ್ಕೃತ ವಿಭಾಗ ಕಡ್ಡಾಯ: ಕೇಂದ್ರೀಯ ವಿದ್ಯಾಲಯ

 ನವದೆಹಲಿ: 2026-27ನೇ ಶೈಕ್ಷಣಿಕ ವರ್ಷದಿಂದ ಎಲ್ಲ ಕೇಂದ್ರೀಯ ವಿದ್ಯಾಲಯಗಳಲ್ಲಿ 6 ಮತ್ತು 9ನೇ ತರಗತಿಗಳಲ್ಲಿ ಕನಿಷ್ಠ ಒಂದು ಸಂಸ್ಕೃತ ವಿಭಾಗವನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆ (ಏಗಿS) ನಿರ್ದೇಶಿಸಿದೆ. 


KVS ಪರಿಚಯಿಸಿರುವ ಹೊಸ ಮೂರನೇ ಭಾಷೆ ಕಾರ್ಯಚೌಕಟ್ಟಿನಡಿ ಈ ಕ್ರಮ ಜಾರಿಗೆ ಬರಲಿದೆ.

ಈ ಸಂಬಂಧ ಮೇ 29ರಂದು ಸುತ್ತೋಲೆ ಹೊರಡಿಸಿರುವ ಏಗಿS, ವಿದ್ಯಾರ್ಥಿಗಳು ಮತ್ತು ಪೋಷಕರ ಭಾಷಾ ಆದ್ಯತೆಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಶಾಲೆಗಳಿಗೆ ಸೂಚಿಸಿದೆ.

ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾದ ಕೆವಿಎಸ್ ನ ಹೊಸ ನೀತಿಯ ಪ್ರಕಾರ, ವಿದ್ಯಾರ್ಥಿಗಳು ಹಿಂದಿ (ಆರ್-1) ಮತ್ತು ಇಂಗ್ಲಿಷ್ (ಆರ್-2) ಜೊತೆಗೆ ಮೂರನೇ ಭಾಷೆ (ಆರ್-3)ಯನ್ನು ಕಲಿಯಬೇಕು. ಮೂರನೇ ಭಾಷೆಯಾಗಿ ಸಂಸ್ಕೃತ ಅಥವಾ ಭಾರತದ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಒಳಗೊಂಡಿರುವ ಯಾವುದೇ ಪ್ರಾದೇಶಿಕ ಅಥವಾ ರಾಜ್ಯ ಭಾಷೆಯನ್ನು ಆಯ್ಕೆ ಮಾಡಬಹುದು.

ವಿದ್ಯಾರ್ಥಿಗಳು ತಮ್ಮ ಇಚ್ಛೆಯಂತೆ ಸಂಸ್ಕೃತ ಅಥವಾ ಪ್ರಾದೇಶಿಕ ಭಾಷೆಯನ್ನು ಆರಿಸಿಕೊಳ್ಳಲು ಅವಕಾಶವಿದೆ. ಆದರೆ ವರ್ಗಾವಣೆಯಾಗುವ ಉದ್ಯೋಗಿಗಳ ಮಕ್ಕಳಿಗೆ ಅನುಕೂಲವಾಗುವಂತೆ ಪ್ರತಿ ಶಾಲೆಯಲ್ಲೂ ಕನಿಷ್ಠ ಒಂದು ಸಂಸ್ಕೃತ ವಿಭಾಗ ಇರಲೇಬೇಕು ಎಂದು ಏಗಿS ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳ ಭಾಷಾ ಆಯ್ಕೆಯ ಮಾಹಿತಿಯನ್ನು ಸಮಾಗಮ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಶಿಕ್ಷಕರ ಅಗತ್ಯವನ್ನು ನಿರ್ಧರಿಸಲಾಗುವುದು.

ಸುತ್ತೋಲೆಯ ಪ್ರಕಾರ, ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಭಾಷೆಗಳ ಆಧಾರದ ಮೇಲೆ 6 ಮತ್ತು 9ನೇ ತರಗತಿಗಳಲ್ಲಿ ಸಂಸ್ಕೃತ ಹಾಗೂ ಪ್ರಾದೇಶಿಕ ಭಾಷೆಯ ವಿಭಾಗಗಳ ವಿವರಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು. ಅಲ್ಲದೆ, ಒಂದೇ ಆರ್-3 ಭಾಷೆಯನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳನ್ನು ಒಂದೇ ವಿಭಾಗದಲ್ಲಿ ಸೇರಿಸಬೇಕು ಎಂದು ತಿಳಿಸಲಾಗಿದೆ.

ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ವಿಭಾಗಗಳನ್ನು ಹೇಗೆ ರಚಿಸಬೇಕು ಎಂಬ ಮಾರ್ಗಸೂಚಿಗಳನ್ನೂ ಸುತ್ತೋಲೆಯಲ್ಲಿ ವಿವರಿಸಲಾಗಿದೆ. 









   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries