HEALTH TIPS

ಚೀನಾದಲ್ಲಿ ಅಕ್ರಮ ಗಣಿ ಕುಸಿದು ಐವರ ಮೃತ್ಯು; ಶಾಂಕ್ಸಿ ದುರಂತದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ಅವಘಡ

 ಬೀಜಿಂಗ್: 2009ರ ಬಳಿಕ ಚೀನಾದಲ್ಲಿ ಸಂಭವಿಸಿದ ಭೀಕರ ಗಣಿ ದುರಂತದಲ್ಲಿ ಕನಿಷ್ಠ 82 ಮಂದಿ ಮೃತಪಟ್ಟ ಕೆಲವೇ ದಿನಗಳ ಅಂತರದಲ್ಲಿ, ದೇಶದ ನೈರುತ್ಯ ಭಾಗದ ಯುನಾನ್ ಪ್ರಾಂತ್ಯದಲ್ಲಿ ಅಕ್ರಮ ಗಣಿ ಕುಸಿತ ಸಂಭವಿಸಿ ಐವರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.


ಈ ಘಟನೆ ರವಿವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 4.30ಕ್ಕೆ ಯುನಾನ್ ಪ್ರಾಂತ್ಯದ ಹುಯಿಝೆ ಕೌಂಟಿಯಲ್ಲಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಕ್ಸಿನುವಾ ತಿಳಿಸಿದೆ. ಗಣಿಯಲ್ಲಿ ಯಾವ ಖನಿಜಕ್ಕಾಗಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿತ್ತು ಎಂಬುದನ್ನು ವರದಿಯಲ್ಲಿ ಸ್ಪಷ್ಟಪಡಿಸಲಾಗಿಲ್ಲ.

ಅಪಘಾತದಲ್ಲಿ ಸಿಲುಕಿದ್ದ ಆರು ಮಂದಿಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಜೀವಂತವಾಗಿ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮೇ 22ರಂದು ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ್ದ ಭಾರೀ ಅನಿಲ ಸ್ಫೋಟದಲ್ಲಿ 82 ಮಂದಿ ಮೃತಪಟ್ಟಿದ್ದರು. ಆ ದುರಂತದಲ್ಲಿ 128 ಮಂದಿ ಗಾಯಗೊಂಡಿದ್ದು, ಇಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ. ಯುನಾನ್ ನ ಇತ್ತೀಚಿನ ಗಣಿ ಕುಸಿತ ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries