HEALTH TIPS

ಪಿಎಂ ಸೂರ್ಯ ಘರ್ ಯೋಜನೆಯ ಸಬ್ಸಿಡಿ ಬಿಟ್ಟುಕೊಡುವ ಗ್ರಾಹಕರಿಗೆ ವಿಶೇಷ ವಿನಾಯಿತಿ

 ನವದೆಹಲಿ: ಪಿಎಂ ಸೂರ್ಯ ಘರ್ ಯೋಜನೆಯಲ್ಲಿ ಸರ್ಕಾರದ ಸಬ್ಸಿಡಿಯನ್ನು ಬೇಡವೆಂದು ಬಿಟ್ಟುಕೊಡುವ ಮನೆ ಮಾಲೀಕರು, ಇನ್ನು ಮುಂದೆ ತಮ್ಮ ಮನೆಯ ಚಾವಣಿಗೆ ವಿದೇಶಿ ಅಥವಾ ಯಾವುದೇ ಕಂಪನಿಯ (ನಾನ್-ಡಿಸಿಆರ್) ಸೋಲಾರ್ ಪ್ಯಾನಲ್‌ಗಳನ್ನು ಬಳಸಬಹುದು ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) ಗುರುವಾರ ಹೇಳಿದೆ.


ಸಬ್ಸಿಡಿ ಬೇಡವೆಂದು ನೆಟ್ ಮೀಟರಿಂಗ್ ವ್ಯವಸ್ಥೆ ಪಡೆಯುವ ಗ್ರಾಹಕರಿಗೆ ಸರ್ಕಾರ ಅನುಮೋದಿಸಿದ ಕಂಪನಿಗಳ ಸೌರ ಕೋಶಗಳ (ಎಎಲ್‌ಎಂಎಂ ಲಿಸ್ಟ್-2) ನಿಯಮದಿಂದ ವಿನಾಯಿತಿ ನೀಡಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದ್ದು, ಈ ವಿನಾಯಿತಿಯು ಯೋಜನೆಯ ಅವಧಿ ಮುಗಿಯುವ 2027ರ ಮಾರ್ಚ್‌ 31ರವರೆಗೆ ಚಾಲ್ತಿಯಲ್ಲಿರುತ್ತದೆ.

ಅಂತಹ ಗ್ರಾಹಕರು ಪಿಎಂ ಸೂರ್ಯ ಘರ್ ರಾಷ್ಟ್ರೀಯ ಪೋರ್ಟಲ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಎಎಲ್‌ಎಂಎಂ ಲಿಸ್ಟ್-2 ನಿಯಮದಿಂದ ವಿನಾಯಿತಿ ಪಡೆಯಲು ರಾಷ್ಟ್ರೀಯ ಸೌರಶಕ್ತಿ ಸಂಸ್ಥೆಯ (ಎನ್‌ಐಎಸ್‌ಇ) ಡಿಸಿಆರ್‌ ಪೋರ್ಟಲ್‌ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.‌

ಈ ಸೀಮಿತ ವಿನಾಯಿತಿಯು ಕೇವಲ 'ಗಿವ್ ಇಟ್ ಅಪ್' ಮಾರ್ಗದಡಿ ಸಬ್ಸಿಡಿ ಬಿಟ್ಟುಕೊಡುವ ಮನೆಗಳ ಚಾವಣಿ ಸೌರಶಕ್ತಿ (ಆರ್‌ಟಿಎಸ್) ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ. ಇತರ ಎಲ್ಲಾ ಚಾವಣಿ ಸೌರಶಕ್ತಿ ಯೋಜನೆಗಳು ಎಂದಿನಂತೆ ಈಗಿರುವ ನಿಯಮಗಳ ಪ್ರಕಾರವೇ ಎಎಲ್‌ಎಂಎಂ ಕಡ್ಡಾಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

2026ರ ಜೂನ್ 1ರ ಎಎಲ್‌ಎಂಎಂ ಗಡುವನ್ನು ಸಚಿವಾಲಯವು ಮೇ ತಿಂಗಳಲ್ಲಿ ವಿಸ್ತರಿಸದ ಕಾರಣ ಈ ಸ್ಪಷ್ಟನೆ ಬಂದಿದೆ. ಸಬ್ಸಿಡಿ ಪಡೆಯುವ ಮತ್ತು ಇತರ ಯೋಜನೆಗಳಿಗೆ ಎಂದಿನಂತೆ ದೇಶೀಯ ಉಪಕರಣಗಳ ಕಡ್ಡಾಯ ನಿಯಮಗಳು ಮುಂದುವರಿಯಲಿವೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries