HEALTH TIPS

ಪಾಕಿಸ್ತಾನಕ್ಕೆ ಭೇಟಿ ನೀಡಿದ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್

 ಇಸ್ಲಾಮಾಬಾದ್ : ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್ ಅವರು ಮಂಗಳವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದರು. 


ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಹಾಗೂ ಇರಾನ್‌ನ ಸಹಿ ಹಾಕಿರುವ ಶಾಂತಿ ಒಪ್ಪಂದದ ಎಲ್ಲಾ ಷರತ್ತುಗಳ ಅನುಷ್ಠಾನ, ಉಭಯ ರಾಷ್ಟ್ರಗಳ ಹಿತಾಸಕ್ತಿಗೆ ಅನುಗುಣವಾದ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸುವುದು ಈ ಭೇಟಿಯ ಉದ್ದೇಶವಾಗಿತ್ತು.

ಪ್ರಧಾನಿ ಶೆಹಬಾಜ್ ಶರೀಫ್‌ ಅವರ ಆಹ್ವಾನದ ಮೇರೆಗೆ ಮಸೂದ್‌ ಪಾಕಿಸ್ತಾನಕ್ಕೆ ಬರಲಿದ್ದಾರೆ. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆಯು ಈ ಹಿಂದೆ ತಿಳಿಸಿತ್ತು.

ಮಸೂದ್‌ ಅವರು ನೂರ್‌ ಖಾನ್‌ ವಾಯುನೆಲೆಯಲ್ಲಿ ಬಂದಿಳಿದರು. ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಶೆಹಬಾಜ್ ಶರೀಫ್‌ ಹಾಗೂ ಇತರ ಉನ್ನತ ನಾಯಕರು ಅವರನ್ನು ಬರಮಾಡಿಕೊಂಡರು.

ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ಅವರು ಪ್ರತ್ಯೇಕವಾಗಿ ಮಸ್ಕತ್‌ನಿಂದ ಇಲ್ಲಿಗೆ ಬಂದಿಳಿದರು. ಹೊರ್ಮುಜ್‌ ಜಲಸಂಧಿಯ ನಿರ್ವಹಣೆ ಕುರಿತು ಒಮಾನಿ ನಾಯಕತ್ವದೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸಲು ಅವರು ಮಸ್ಕತ್‌ಗೆ ತೆರಳಿದ್ದರು.

ಶೆಹಬಾಜ್‌ ಅವರೊಂದಿಗೆ ಮಸೂದ್‌ ಮಾತುಕತೆ ನಡೆಸಿದರು. 'ಇರಾನ್‌-ಅಮೆರಿಕ ಒಪ್ಪಂದವು ಪಶ್ಚಿಮ ಏಷ್ಯಾದಲ್ಲಿ ಸ್ಥಿರತೆ ಹಾಗೂ ಭದ್ರತೆಯನ್ನು ಬಲಪಡಿಸಲು ಸಹಾಯ ಮಾಡಲಿದೆ' ಎಂದು ಮಸೂದ್‌ ಹೇಳಿರುವುದಾಗಿ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

'ಮಾತುಕತೆಯು ಎಷ್ಟು ಪರಿಣಾಮಕಾರಿಯಾಗಿ ಇರಲಿದೆ ಎಂಬುದು, ಒಪ್ಪಂದಗಳಿಗೆ ಬದ್ಧರಾಗಿರುವುದು ಹಾಗೂ ಅವುಗಳ ಅನುಷ್ಠಾನವನ್ನು ಅವಲಂಬಿಸಿರುತ್ತದೆ' ಎಂದು ಮಸೂದ್‌ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries