HEALTH TIPS

ಆಕಾಶದಲ್ಲಿ ಇರಾನ್ ಡ್ರೋನ್‌ಗಳ ಜೆಲ್ಲಿಫಿಶ್ ಆಕಾರ: ಅಮೆರಿಕ ಪೈಲಟ್ ಅಚ್ಚರಿ ಹೇಳಿಕೆ

 ವಾಷಿಂಗ್ಟನ್: ಕಳೆದ ಏಪ್ರಿಲ್‌ನಲ್ಲಿ ಇರಾನ್ ವಾಯುಪ್ರದೇಶದಲ್ಲಿ ಅಮೆರಿಕದ ಎಫ್-15ಇ (F-15E) ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಲಾಗಿತ್ತು. ವಿಮಾನ ಪತನಗೊಳ್ಳುವ ಮುನ್ನ ಅದರಿಂದ ಜಿಗಿದಿದ್ದ ಪೈಲಟ್ ಅನ್ನು ಕೆಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಅಮೆರಿಕದ ವಿಶೇಷ ಸೇನಾ ಪಡೆಗಳು ಯಶಸ್ವಿಯಾಗಿ ರಕ್ಷಿಸಿದ್ದವು. 


ಶಸ್ತ್ರಾಸ್ತ್ರ ವ್ಯವಸ್ಥೆಯ ಅಧಿಕಾರಿಯನ್ನೂ ಸುರಕ್ಷಿತವಾಗಿ ಪಾರು ಮಾಡಲಾಗಿತ್ತು. ಇದೀಗ ಈ ವಿಮಾನ ಪತನದ ಕುರಿತು ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.

ಇತ್ತೀಚಿನ ವರದಿಯ ಪ್ರಕಾರ, ಪತನಗೊಂಡ ಎಫ್-15ಇ ವಿಮಾನದಿಂದ ಜಿಗಿಯುವ ಮುನ್ನ ತಾವು ಕಂಡ ಆಘಾತಕಾರಿ ದೃಶ್ಯವೊಂದನ್ನು ಅಮೆರಿಕದ ಪೈಲಟ್ ವಿವರಿಸಿದ್ದಾರೆ.

ಇರಾನ್‌ನ ಅಸಂಖ್ಯಾತ ಡ್ರೋನ್‌ಗಳು ಗಾಳಿಯಲ್ಲಿ ಒಟ್ಟಾಗಿ ಸೇರಿ ಚಲಿಸುತ್ತಿದ್ದವು. ಅವು ನೋಡಲು ಸಮುದ್ರದಲ್ಲಿರುವ ಜೆಲ್ಲಿಫಿಶ್ ಆಕಾರದಲ್ಲಿ ಗೋಚರಿಸುತ್ತಿದ್ದವು ಎಂದು ಅವರು ಹೇಳಿಕೊಂಡಿದ್ದಾರೆ.

'ಹಲವಾರು ಡ್ರೋನ್‌ಗಳು ಪರಸ್ಪರ ಸಂಪರ್ಕ ಹೊಂದಿದ್ದವು. ಮೇಲ್ಭಾಗದಲ್ಲಿ ದೊಡ್ಡ ಡ್ರೋನ್‌ಗಳಿದ್ದರೆ, ಅವುಗಳ ಕೆಳಗೆ ಸಣ್ಣ ಡ್ರೋನ್‌ಗಳು ಕಾಲುಗಳಂತೆ ನೇತಾಡುತ್ತಾ ಒಟ್ಟಾಗಿ ಚಲಿಸುತ್ತಿದ್ದವು' ಎಂದು ಮೂಲವೊಂದು ತಿಳಿಸಿದೆ. ಆಕಾಶದಲ್ಲಿ ಡ್ರೋನ್‌ಗಳ ಮೈನ್‌ಫೀಲ್ಡ್ ಅನ್ನೇ ತಾವು ನೋಡಿದ್ದಾಗಿ ಪೈಲಟ್ ವಿವರಿಸಿದ್ದಾರೆ ಎಂದು ಮೂಲ ತಿಳಿಸಿದೆ.

ಪೈಲಟ್ ಹೇಳಿಕೆ ಬಗ್ಗೆಯೇ ಅನುಮಾನ

ಪೈಲಟ್ ನೀಡಿರುವ ಹೇಳಿಕೆಯನ್ನು ಅಮೆರಿಕದ ಗುಪ್ತಚರ ಅಧಿಕಾರಿಗಳು ‌ಸಂಪೂರ್ಣವಾಗಿ ನಂಬಲು ಸಿದ್ಧರಿಲ್ಲ ಎಂದು ವರದಿ ತಿಳಿಸಿದೆ.

ಪೈಲಟ್ ಹೇಳಿಕೆಯ ಬಗ್ಗೆ ಪ್ರಶ್ನಿಸಿರುವ ಅಧಿಕಾರಿಗಳು, 'ಒಂದು ಕಡೆ, ವಿಮಾನ ಪತನದ ತೀವ್ರತೆಗೆ ಪೈಲಟ್ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಅವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಇರಾನ್ ಯುದ್ಧದ ಸಮಯದಲ್ಲಿ ಅವರು ಆಕಾಶದಿಂದ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದು ಇದು ಎರಡನೇ ಬಾರಿ‌. ಸಂಘರ್ಷದ ಆರಂಭಿಕ ದಿನಗಳಲ್ಲಿ ಕುವೈತ್ ಪಡೆಗಳಿಂದ ನಡೆದ ಗುಂಡಿನ ದಾಳಿ ಘಟನೆಯಲ್ಲೂ ಇವರಿರುವ ವಿಮಾನ ಪತನಗೊಂಡಿತ್ತು ಎಂದು ತಿಳಿಸುವ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries