HEALTH TIPS

ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳಿಗೆ ಮೇಜು ಕುರ್ಚಿ ವಿತರಣೆ

ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಗೊಳಪಟ್ಟ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಂಗಲ್ಪಾಡಿ ಪಂಚಾಯತಿ ಪ್ಲಾನ್ ಫಂಡ್‍ನಿಂದ ಕೊಡಮಾಡಿದ ಮೇಜು ಕುರ್ಚಿಗಳ ವಿತರಣಾ ಸಮಾರಂಭವು ಜಿ.ಎಲ್.ಪಿ ಶಾಲೆ ಮುಳಿಂಜದಲ್ಲಿ ನಡೆಯಿತು. 


ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ರೆಹಮಾನ್ ಕಾರ್ಯಕ್ರಮವನ್ನು ಪೀಠೋಪಕರಣ ವಿತರಿಸುವುದರ ಮೂಲಕ ಉದ್ಘಾಟಿಸಿದರು. ಪಂಚಾಯತಿ ಉಪಾಧ್ಯಕ್ಷೆ ಸಮೀನ ಟೀಚರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್‍ಕ್ರಾಸ್ತ, ಗ್ರಾಮ ಪಂಚಾಯತಿ ಸದಸ್ಯರಾದ ಅಶೋಕ ಕೆ, ಫಾತಿಮತ್ ಝೌರ, ನಫೀನ, ಮುನೀರ ಹಾಗು ಎಸ್.ಸಿ ಪ್ರೇರಕ್ ಸುಮಲತಾ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಂಗಲ್ಪಾಡಿ ಪಂಚಾಯತಿ ವಿದ್ಯಾಭ್ಯಾಸ ಸಮಿತಿ ಪಿ.ಇ.ಸಿ ಕಾರ್ಯದರ್ಶಿ, ಜಿ.ಎಲ್.ಪಿ ಮುಳಿಂಜ ಶಾಲೆಯ  ಮುಖ್ಯ ಶಿಕ್ಷಕಿ  ಚಿತ್ರಾವತಿ ಚಿಗುರುಪಾದೆ ಸಮಾರಂಭದ ನೇತೃತ್ವ ವಹಿಸಿದ್ದರು. ಎಸ್.ಟಿ ಪ್ರೇರಕ ಪ್ರಮೋಟರ್ ದಿವಿನ ವಂದಿಸಿದರು. ಪಂಚಾಯತಿಯ ಹದಿನೈದು ಪರಿಶಿಷ್ಟ ಜಾತಿ ಹಾಗು ಆರು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿ ಮೇಜು ಕುರ್ಚಿಗಳನ್ನು ವಿತರಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries