ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು.
ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯೆ ನಾಜಿಯಾ ಅಝೀಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿಟಿಎ ಅಧ್ಯಕ್ಷ ಇಬ್ರಾಹಿಂ ಹನೀಫ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಆರ್.ಸಿ. ತರಬೇತುದಾರೆ ಸುಮಯ್ಯ ಟೀಚರ್, ಸ್ಪೆಷಲ್ ಎಜುಕೇಟರ್ ಬಿಂದಿಯಾ ಟೀಚರ್, ಶಾಲಾ ಪಿ.ಟಿ.ಎ ಉಪಾಧ್ಯಕ್ಷ ಮೊಹಮ್ಮದ್ ಇಂತಿಯಾಜ್ ಹಾಗೂ ಶಾಲೆಯ ಹಿರಿಯ ಶಿಕ್ಷಕ ರಿಯಾಜ್ ಎಂ.ಎಸ್. ಅವರು ಶುಭ ಹಾರೈಸಿದರು. ತಮಾಮ್ ಫರ್ನಿಚರ್ ಮತ್ತು ಗೋಲ್ಡ್ ಕಿಂಗ್ ಉಪ್ಪಳ ಸಂಸ್ಥೆಗಳು ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ಬ್ಯಾಗ್ ವಿತರಿಸಲಾಯಿತು. ನೂತನವಾಗಿ ಶಾಲೆಗೆ ಸೇರ್ಪಡೆಗೊಂಡ ಮಕ್ಕಳಿಗೆ ಶಾಲಾ ಕಿಟ್ ಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಸಿಹಿತಿಂಡಿಯನ್ನು ನೀಡಲಾಯಿತು. ಸಾರ್ವಜನಿಕ ಶಿಕ್ಷಣ ಸಚಿವರ ಶಾಲಾ ಪ್ರವೇಶೋತ್ಸವ ಸಂದೇಶದ ವೀಡಿಯೊವನ್ನು ಪ್ರದರ್ಶಿಸಲಾಯಿತು. ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಅವರು ಸ್ವಾಗತಿಸಿ, ಐಶ್ವರ್ಯ ಟೀಚರ್ ವಂದಿಸಿದರು. ಅಬ್ದುಲ್ ಬಶೀರ್ ನಿರೂಪಿಸಿದರು.

.jpg)
.jpg)
