ಮಂಜೇಶ್ವರ: ಉದ್ಯಾವರ ತೋಟ ಜಿ.ಎಮ್.ಎಲ್.ಪಿ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರವೇಶೋತ್ಸವ ಜರಗಿತು. ಹೊಸದಾಗಿ ಶಾಲೆಗೆ ಸೇರಿದ ಹಾಗೂ ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಉದ್ಯಾವರ ದುಬೈ ಸಮಿತಿ ಯು.ಡಿ.ಸಿಯ ಪರವಾಗಿ ಪಠನ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದರು. ಶಾಲಾ ಪಿ.ಟಿ.ಎ ಅಧ್ಯಕ್ಷ ಅಬ್ದುಲ್ಲ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ಯು.ಡಿ.ಸಿ ಸಮಿತಿಯ ಉಪಾಧ್ಯಕ್ಷ ಅನ್ವರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಹಮ್ಮದ್ ಸ್ವಾದಿಕ್ ಸಅದಿ, ಸುಧಾಕರ ಮಾಸ್ತರ್, ಅಬ್ದುಲ್ಲಾ ಮೋನು, ಸಮೀನ, ಅಭಿಲಾಷ್ ರಾವ್, ಸಮೀನ ನಸ್ರಿಮ್ ಶುಭಾಶಂಸನೆಗೈದರು. ರವಿಶಂಕರ ನೆಗಳಗುಳಿ ನಿರೂಪಿಸಿ,ವಂದಿಸಿದರು.

.jpg)
