ಮಂಜೇಶ್ವರ: ಮಂಜೇಶ್ವರ ಸರ್ಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆಯ 2026-27 ನೇ ಸಾಲಿನ ಶೈಕ್ಷಣಿಕ ವರ್ಷದ ನವಾಗತ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸುವ ಶಾಲಾ ಪ್ರವೇಶೋತ್ಸವ 2026-27 ನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಎಸ್.ಎಂ.ಸಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ಲ ಗುಡ್ಡೆಕೇರಿ ಉಧ್ಘಾಟಿಸಿದರು. ನಿವೃತ್ತ ಪ್ರೀ ಪ್ರೈಮರಿ ಶಿಕ್ಷಕಿ ಝೀನಾ ಮರಿಯಂ, ಜಯಲಕ್ಷ್ಮಿ, ಮಾತೃ ಮಂಡಳಿ ಅಧ್ಯಕ್ಷೆ ರಹನಾಝ್, ಎಸ್.ಎಂ.ಸಿ. ಉಪಾಧ್ಯಕ್ಷೆ ಅಯಿಷ, ಉಪಸ್ಥಿತರಿದ್ದರು. ನವಾಗತ ಮಕ್ಕಳಿಗೆ ಶಾಲಾ ಶಿಕ್ಷಕ ವೃಂದದ ವತಿಯಿಂದ ಕಲಿಕೊಪಕರಣ ಕಿಟ್ ಹಾಗೂ ಶಿಕ್ಷಣ ಇಲಾಖೆಯಿಂದ ಕೊಡಮಾಡಿದ ಪಾಠ ಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ಮಕ್ಕಳನ್ನು ವಾದ್ಯಘೋಷಗಳೊಂದಿಗೆ ಶಾಲೆಗೆ ಸ್ವಾಗತಿಸಲಾಯಿತು. ಮುಖ್ಯೋಪಾಧ್ಯಾಯ ಸುಕೇಶ ಎ. ಸ್ವಾಗತಿಸಿ, ಎಸ್.ಅರ್.ಜಿ. ಕನ್ವಿನರ್ ಭಿಫಾತುಮ್ಮ ಟೀಚರ್ ವಂದಿಸಿದರು. ಶಿಕ್ಷಕ ಜಬ್ಬಾರ್ ಬಿ. ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
