HEALTH TIPS

ಗಾಝಾ ಗಡಿ ಕೇಂದ್ರಗಳನ್ನು ಮುಚ್ಚಲು ನಿರ್ಧಾರ; ಇಸ್ರೇಲ್ ನಡೆ ಖಂಡಿಸಿದ ಮಕ್ಕಳ ಹಕ್ಕುಗಳ ಸಂಘಟನೆ ಸೇವ್ ದಿ ಚಿಲ್ಡ್ರನ್‌

ಜಿನೀವಾ: ಗಾಝಾಕ್ಕೆ ಮಾನವೀಯ ನೆರವು ಸಾಗಿಸಲು ಬಳಸಲಾಗುವ ಕರೇಮ್ ಅಬು ಸಲೇಂ (ಕೆರೆಮ್ ಶಾಲೋಮ್) ಮತ್ತು ರಫಾ ಗಡಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಿರುವ ಇಸ್ರೇಲ್‌ನ ಕ್ರಮವನ್ನು ಮಕ್ಕಳ ಹಕ್ಕುಗಳ ಸಂಘಟನೆಯಾದ ಸೇವ್ ದಿ ಚಿಲ್ಡ್ರನ್‌ ಖಂಡಿಸಿದೆ ಎಂದು Aljazeera ವರದಿ ಮಾಡಿದೆ.

'ಮಾನವೀಯ ನೆರವು ರಾಜಕೀಯ ಸಾಧನವಲ್ಲ. ಅದನ್ನು ಯಾವುದೇ ರೀತಿಯ ಒತ್ತಡ ಹೇರುವ ಅಥವಾ ರಾಜಕೀಯ ಉದ್ದೇಶಗಳಿಗೆ ಬಳಸಬಾರದು' ಎಂದು ಸಂಘಟನೆಯ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಪೂರ್ವ ಯುರೋಪ್‌ ವಿಭಾಗದ ಪ್ರಾದೇಶಿಕ ನಿರ್ದೇಶಕ ಅಹ್ಮದ್ ಅಲ್‌ಹೆಂದಾವಿ ಹೇಳಿದ್ದಾರೆ.

'ಗಾಝಾದಲ್ಲಿನ ಮಕ್ಕಳ ಸುರಕ್ಷತೆ ಮತ್ತು ಅವರ ಮೂಲಭೂತ ಅಗತ್ಯಗಳನ್ನು ಪ್ರದೇಶದಲ್ಲಿನ ಇತರ ಸೇನಾ ಬೆಳವಣಿಗೆಗಳಿಗೆ ಸಂಬಂಧಿಸಿ ನೋಡಬಾರದು. ಮಕ್ಕಳ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

ಇರಾನ್‌ ನ ಕ್ಷಿಪಣಿ ದಾಳಿಗಳ ಹಿನ್ನೆಲೆಯಲ್ಲಿ ಗಾಝಾಕ್ಕೆ ನೆರವು ಸಾಗಿಸುವ ಎರಡು ಪ್ರಮುಖ ಗಡಿ ಕೇಂದ್ರಗಳನ್ನು ರವಿವಾರದಿಂದ ಮುಚ್ಚುವುದಾಗಿ ಇಸ್ರೇಲ್‌ ಘೋಷಿಸಿತ್ತು. ಆದರೆ, ಅವುಗಳನ್ನು ಮಂಗಳವಾರ ಪುನಃ ತೆರೆಯಲಾಗುವುದು ಎಂದು ಸೋಮವಾರ ತಿಳಿಸಿತ್ತು.

'ಗಾಝಾದ ಮಕ್ಕಳು ಈಗಾಗಲೇ ತೀವ್ರ ಹಸಿವು ಮತ್ತು ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ನೀರು, ಔಷಧ, ಆಶ್ರಯ ಹಾಗೂ ಬದುಕಿಗೆ ಅಗತ್ಯವಾದ ಇತರ ಮೂಲಭೂತ ಸೌಲಭ್ಯಗಳನ್ನು ನಿರಾಕರಿಸಬಾರದು. ಗಡಿ ಕೇಂದ್ರಗಳನ್ನು ತಕ್ಷಣ ತೆರೆದು ಮಾನವೀಯ ನೆರವು ಯಾವುದೇ ಅಡ್ಡಿಯಿಲ್ಲದೆ ತಲುಪಲು ಅವಕಾಶ ಕಲ್ಪಿಸಬೇಕು' ಎಂದು ಅಹ್ಮದ್ ಅಲ್‌ಹೆಂದಾವಿ ಆಗ್ರಹಿಸಿದ್ದಾರೆ.

2023ರ ಅಕ್ಟೋಬರ್‌ 7ರಂದು ಯುದ್ಧ ಆರಂಭವಾದ ಬಳಿಕ ಗಾಝಾ ಪಟ್ಟಿಯಲ್ಲಿ ಕನಿಷ್ಠ 21,289 ಮಕ್ಕಳು ಮೃತಪಟ್ಟಿದ್ದಾರೆ ಎಂದು ಸೇವ್ ದಿ ಚಿಲ್ಡ್ರನ್‌ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries