HEALTH TIPS

ಪಿಒಕೆಯಲ್ಲಿ ಸರಕಾರ ವಿರೋಧಿ ಪ್ರತಿಭಟನೆಗೆ ಮಹಿಳೆಯರು, ಶಾಲಾ ಮಕ್ಕಳ ಬೆಂಬಲ

ರಾವಲ್‌ಕೋಟ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ವಿರೋಧಿ ಪ್ರತಿಭಟನೆಗಳು ಮಂಗಳವಾರ ಸತತ 15ನೇ ದಿನಕ್ಕೆ ಕಾಲಿಟ್ಟಿದ್ದು, ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಶಾಲಾ ಮಕ್ಕಳು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

ರಾವಲ್‌ಕೋಟ್‌ನ ಈದ್ಗಾ ಮೈದಾನದ ಪ್ರಮುಖ ಪ್ರತಿಭಟನಾ ಸ್ಥಳದಲ್ಲಿ 70,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದಾರೆ. ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಶಾಲಾ ಮಕ್ಕಳು 'ಮೂಲಭೂತ ಶಿಕ್ಷಣ, ಉಚಿತ ಶಿಕ್ಷಣ, ಇಂಟರ್‌ನೆಟ್ ಸಂಪರ್ಕ ಮರುಸ್ಥಾಪನೆಗೆ' ಆಗ್ರಹಿಸಿ ಘೋಷಣೆ ಕೂಗಿದರು.

ರಾವಲ್‌ಕೋಟ್ ಮಾತ್ರವಲ್ಲದೆ, ಈ ಪ್ರತಿಭಟನೆಗಳು ಹಲವಾರು ಪಟ್ಟಣಗಳು ಮತ್ತು ಹಳ್ಳಿಗಳಿಗೂ ಹಬ್ಬಿವೆ. ಸುಧ್ನೋತಿ ಜಿಲ್ಲೆಯ ತರಾರ್ ಖೇಲ್‌ನಲ್ಲಿ ಹಾಗೂ ಮಾಂಧೋಲ್‌ನಲ್ಲಿ ನೂರಾರು ಮಹಿಳೆಯರು ಮೆರವಣಿಗೆ ನಡೆಸಿ, ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿದರು. ಪಾಕಿಸ್ತಾನ ಸರಕಾರ ಮತ್ತು ಸೇನೆಯನ್ನು ಆಕ್ರಮಣಕಾರರು ಎಂದು ಖಂಡಿಸಿದರು ಎಂದು NDTV ವರದಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries