ಕಾಸರಗೋಡು: ಹವಾಮಾನ ಇಲಾಖೆ ಕಾಸರಗೋಡು ಸೇರಿದಂತೆಮೂರು ಜಿಲ್ಲೆಗಳಲ್ಲಿ ಮಂಗಳವಾರ ರೆಡ್ ಅಲರ್ಟ್ ಘೋಷಿಸಿದ್ದರೂ, ನಿರೀಕ್ಷಿತ ಮಳೆಯಾಗದೆ ಹವಾಮಾನ ವರದಿ ಹುಸಿಯಾಗಿತ್ತು. ಹಗಲಿನ ಕಾಲಾವಧಿಯಲ್ಲಿ ಹನಿ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂ. 9ರಂದು ಅತಿ ತೀವ್ರ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆ ನಿರ್ದೇಶ ಪ್ರಕಾರ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವೃತ್ತಿಪರ ಕಾಲೇಜುಗಳು ಸೇರಿ
ದಂತೆ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ರಜೆ ಘೋಷಿಸಿದ್ದರು.
ಜೂನ್ 6ರಂದೂ ರೆಡ್ ಅಲರ್ಟ್ ಘೋಷಣೆಯಾಗಿದ್ದರೂ, ಜಿಲ್ಲೆಯ ಕೆಲವೇ ಪ್ರದೇಶದಲ್ಲಿ ಬಿರುಸಿನ ಮಳೆಯಾಗಿದ್ದು, ಶಿಕ್ಷಣ ಸಂಸ್ಥೆಗಳಿಗೂ ರಜೆ ಸಾರಲಾಗಿತ್ತು. ಕೇರಳದ ಇಂದಿನ ಭೌಗೋಳಿಕ ಸ್ಥಿತಿಗತಿಯನ್ವಯ ಸಣ್ಣ ಮಳೆಗೂ ಭಾರೀ ನೆರೆಗೆ ಕಾರಣವಾಗುತ್ತಿದ್ದು, ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಉಂಟಾಗುತ್ತಿರುವ ಸಮಸ್ಯೆ ಪರಿಗಣಿಸಿ ರೆಡ್ ಅಲರ್ಟ್ ಘೋಷಣೆಯಾಗುತ್ತಿದ್ದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗುತ್ತಿದೆ.

