HEALTH TIPS

ಕಾಯರ್ ಕಟ್ಟೆ ಸರ್ಕಾರಿ ಉನ್ನತ ಪ್ರೌಢ ಶಾಲೆಯಲ್ಲಿ ಅಭಿನಂದನೆ

ಉಪ್ಪಳ: ಪೈವಳಿಕೆ ಕಾಯರ್‍ಕಟ್ಟೆ ಸರ್ಕಾರಿ ಉನ್ನತ ಪ್ರೌಢ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ 2025- 26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸತತ ಮೂರನೇ ಬಾರಿ ನೂರು ಶೇಕಡಾ ಫಲಿತಾಂಶ ದಾಖಲಿಸಲು ಕಾರಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. 


ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಲ್ಲಾ ವಿಷಯದಲ್ಲಿ ಎ ಪ್ಲಸ್ ಗಳಿಸಿದ ಜಯಶ್ರೀ ಪಿ, 9 ವಿಷಯಗಳಲ್ಲಿ ಎ ಪ್ಲಸ್ ಗಳಿಸಿದ ಸಮನ್ವಿ ಎಂ.ಜಿ, ಧನುಷ್ ಡಿ.ಅರ್., 8 ವಿಷಯಗಳಲ್ಲಿ  ಎ ಪ್ಲಸ್ ಗಳಿಸಿದ ಯಶ್ವಿತ, ರೋಹಿತ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಹಿರಿಯ ಹಳೆ ವಿದ್ಯಾರ್ಥಿ, ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್. ಮೂಡಿತ್ತಾಯ ಅವರು ಜೀವನದಲ್ಲಿ  ಉನ್ನತ  ವ್ಯಕ್ತಿತ್ವಗಳಾಗಲು ಕರೆ ನೀಡಿ ಕಲಿತ ಶಾಲೆಯನ್ನು ಎಂದೂ ಮರೆಯದಿರಲು ಗುರು ಹಿರಿಯರನ್ನು ಗೌರವಿಸಲು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ದಿ. ಕಾಡೂರು ಕೃಷ್ಣ ಭಟ್ ದತ್ತಿ ನಿಧಿ ಬಹುಮಾನವನ್ನು ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಭಟ್ ವಿತರಿಸಿದರು. ಪ್ರಾಂಶುಪಾಲ ಡೊಮಿನಿಕ್ ಆಗಸ್ತಿನ್, ಮುಖ್ಯೋಪಾಧ್ಯಾಯಿನಿ ಭಾಗ್ಯಲಕ್ಷ್ಮೀ, ಕಾರ್ಯಕಾರಿ ಸಮಿತಿ ಸದಸ್ಯ ನಿಟ್ಟೋನಿ ವೈದ್ಯ ವೈದ್ಯರ್ ಶುಭಾಶಂಸನೆಗೈದರು. ಸಂಘದ ಅಧ್ಯಕ್ಷ ರಾಘವ ಚೇರಾಲ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಎಂ.ಎಸ್. ಸ್ವಾಗತಿಸಿ, ಅಶ್ವತ್ಥ್ ಲಾಲ್ ಬಾಗ್ ವಂದಿಸಿದರು.  ಹರೀಶ್ ಕುಮಾರ್  ಕಾರ್ಯಕ್ರಮ ನಿರೂಪಿಸಿದರು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ರಾಘವ ಚೇರಾಲ್, ಖಾದರ್ ಹಾಜಿ ಹಾಗ ರವೀಂದ್ರ ಪಾವಲಕೋಡಿ ಪ್ರಾಯೋಜಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries