ಬದಿಯಡ್ಕ: ಪೆರಡಾಲ ನವಜೀವನ ಹಯರ್ ಸೆಕೆಂಡರಿ ಶಾಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಬದಿಯಡ್ಕ ಪಂಚಾಯಿತಿನ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಪಿಟಿ ಅಧ್ಯಕ್ಷ ಹಮೀದ್ ಕೆಡಂಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬದಿಯಡ್ಕ ಪಂಚಾಯತಿ ವಿದ್ಯಾಭ್ಯಾಸ ತಾಯಿ ಸಮಿತಿ ಸದಸ್ಯ ಸಿ ಅವಿನಾಶ್ ರೈ ವಹಿಸಿದ್ದರು. ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎ ಪ್ಲಸ್ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ನಿವೃತ್ತ ಮುಖ್ಯೋಪಾಧ್ಯಾಯ ಪಿ. ಈಶ್ವರ ಭಟ್ ಸನ್ಮಾನಿಸಿ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಸಾಹಿದ ಬಿವಿ ಸ್ವಾಗತಿಸಿ, ಶಾಲಾ ಸ್ಥಾಪಕಿ ಸಿಂಧು ವಂದಿಸಿದರು. ಶಿಕ್ಷಕ ಬಾಲಕೃಷ್ಣ ಮಾಸ್ತರ್ ಹಾಗೂ ಈಶ್ವರ ಮಾಸ್ತರ್ ನಿರೂಪಿಸಿದರು.

.jpg)
.jpg)
