ಕಾಸರಗೋಡು: ಹದಿನಾಲ್ಕರ ಹರೆಯದ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಮದ್ರಸ ಶಿಕ್ಷಕ ಮುಹಮ್ಮದ್ ಹಾಗೂ ಬಾಲಕನನ್ನು ಪ್ರೇರೇಪಿಸಿದ ಮದ್ರಸಾದ ಹಿರಿಯ ವಿದ್ಯಾರ್ಥಿಯೊಬ್ಬನ ವಿರುದ್ಧ ಬೇಕಲ ಪೆÇಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.
2024ರಿಂದ 2026ರ ವರೆಗಿನ ಕಾಲಾವಧಿಯ ವಿವಿಧ ದಿವಸಗಳಲ್ಲಿ ಬಾಲಕನಿಗೆ ಮಹಮ್ಮದ್ ಹಲವು ಬಾರಿ ದೌರ್ಜನ್ಯವೆಸಗಿರುವುದಲ್ಲದೆ, 15ರ ಹರೆಯದ ಹಿರಿಯ ವಿದ್ಯಾರ್ಥಿ ಮದ್ರಸಾ ಶಿಕ್ಷಕನ ಸಲಿಂಗ ಕಿರುಕುಳಕ್ಕೆ ಬಾಲಕನನ್ನು ಪ್ರೇರೇಪಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಪೆÇಲೀಸರು ಹುಡುಕಾಟ ಆರಂಭಿಸಿದ್ದಾರೆ.


