ಕಾಸರಗೋಡು: ಪರಿಚಯ ಹೊಂದಿರುವ ಯುವತಿಯನ್ನು ನಗರದ ವಸತಿಗೃಹವೊಂದಕ್ಕೆ ಕರೆದೊಯ್ದು ಕಟ್ಟಿಹಾಕಿ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಯುವತಿ ನೀಡಿದ ದೂರಿನನ್ವಯ ಕಾಸರಗೋಡು ನಗರಠಾಣೆ ಪೆÇಲೀಸರು ಯುವಕನೊಬ್ಬನ ವಿರುದ್ಧ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶನಿವಾರ ಘಟನೆ ನಡೆದಿದ್ದು, ನಗರ ಸನಿಹದ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಯುವತಿ ಈ ದೂರು ಸಲ್ಲಿಸಿದ್ದಾಳೆ.

