HEALTH TIPS

ಮಂಜೇಶ್ವರದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರು, ಇಬ್ಬರು ಬಾಲಕಿಯರು ಸುರಕ್ಷಿತ ವಾಪಸ್

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಇಬ್ಬರುಬಾಲಕರು ಹಾಗೂ ಇಬ್ಬರು ಬಾಲಕಿಯರನ್ನು ಪತ್ತೆಹಚ್ಚಲಾಗಿದೆ. ಕುಂಜತ್ತೂರು, ಸ್ವಾಗತ್ ಹೋಟೆಲ್‍ನ ಸಮೀಪದ 13 ಮತ್ತು 14 ವರ್ಷ ಪ್ರಾಯದ ಮದ್ರಸ ವಿದ್ಯಾರ್ಥಿಗಳಾದ ಬಾಲಕರಿಬ್ಬರು ಶನಿವಾರ ಸಂಜೆ 5.30ರ ವೇಳೆ ಮನೆಯಿಂದ ನಾಪತ್ತೆಯಾಗಿದ್ದರು. ಸಂಬಂಧಿಕರು ನೀಡಿದ ದೂರಿನನ್ವಯ ಮಂಜೇಶ್ವರ ಠಾನೆ ಪೆÇಲೀಸರು ಕೇಸು ದಾಖಲಿಸಿ ಹುಡುಕಾಟ ನಡೆಸುತ್ತಿದ್ದ ಮಧ್ಯೆ ಇವರಿಬ್ಬರನ್ನು ಬೆಂಗಳೂರು ಬಸ್ ನಿಲ್ದಾಣದಲ್ಲಿ ಪತ್ತೆಹಚ್ಚಲಾಗಿದೆ. ಮಂಜೇಶ್ವರ ಪೆÇಲೀಸರು ನೀಡಿದ ಮಾಹಿತಿ ಆಧಾರದಲ್ಲಿ ಬಸ್ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಕರ್ನಾಟಕ ಪೋಲೀಸರು ಬಾಲಕರನ್ನು ಪತ್ತೆಹಚ್ಚಿದ್ದಾರೆ.  


ಇನ್ನೊಂದು ಪ್ರಕರಣದಲ್ಲಿ ವಕಾರ್ಡಿ ನೀರೊಲಿಕೆಯ ಖಾಸಗಿ ಟ್ರಸ್ಟ್‍ನ ಅಧೀನದಲ್ಲಿರುವ ಹಾಸ್ಟೆಲ್ ಒಂದರಿಂದ 15 ಮತ್ತು 14 ವರ್ಷ ಪ್ರಾಯದ ಇಬ್ಬರು ಹೆಣ್ಣುಮಕ್ಕಳು ಶನಿವಾರ ಸಂಜೆ 7 ಗಂಟೆ ವೇಳೆ ನಾಪತ್ತೆಯಾಗಿದ್ದರು. ಟ್ರಸ್ಟ್ ಅಧಿಕಾರಿಗಳು ನೀಡಿದ ದೂರಿನನ್ವಯ ಪೆÇಲೀಸರು ಕೇಸು ದಾಖಲಿಸಿ ವಿವಿಧ ಕಡೆಗೆ ಮಾಹಿತಿ ನೀಡಿ ನಡೆಸಿದ ತನಿಖೆಯನ್ವಯ ಭಾನುವರ ರಾತ್ರಿ ವೇಳೆ ಬಾಲಕಿಯರಿಬ್ಬರು ಕಾಸರಗೋಡಿನ ಸಂಬಂಧಿಕರ ಮನೆಗೆ ತಲುಪಿರುವ ಮಾಹಿತಿ ತಿಳಿದು ಸ್ಥಳಕ್ಕೆ ಚೈಲ್ಡ್ ಲೈನ್ ಅಧಿಕಾರಿಗಳು ತಲುಪಿ ಇವರಿಬ್ಬರನ್ನು ಸುರಕ್ಷಿತ ಜಾಗಕ್ಕೆ ಳಾಂತರಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries