HEALTH TIPS

ಇರಾನ್‌ನ ಡ್ರೋನ್, ಕ್ಷಿಪಣಿ ಸಂಗ್ರಹಾರಗಳ ಮೇಲೆ ಅಮೆರಿಕ ದಾಳಿ

 ವಾಷಿಂಗ್ಟನ್: ಮಧ್ಯಂತರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವೂ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಶುಕ್ರವಾರ ಇರಾನ್ ಮೇಲೆ ಅಮೆರಿಕ ಮಿಲಿಟರಿ ದಾಳಿ ನಡೆಸಿದೆ ಎಂದು ಸೆಂಟ್ರಲ್ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ. 


ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಾರವಿರುವ ಪ್ರದೇಶ, ರಾಡಾರ್ ಇರುವ ಪ್ರದೇಶಗಳನ್ನು ನಮ್ಮ ಯುದ್ಧ ವಿಮಾನಗಳು ಉಡಾಯಿಸಿವೆ ಎಂದು ಅದು ತಿಳಿಸಿದೆ.

ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಅದು ಸ್ಪಷ್ಟಪಡಿಸಿದೆ.

ಹೊರ್ಮುಜ್ ಜಲಸಂಧಿಯಲ್ಲಿ ನಿಯಮ ಉಲ್ಲಂಘಿಸಿ ಚಲಿಸುತ್ತಿದ್ದ ಹಡಗಿನ ಮೇಲೆ ಎಚ್ಚರಿಕೆಯ ದಾಳಿ ನಡೆಸಲಾಗಿದೆ ಎಂದು ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಇರಾನ್ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ವಲಯದಲ್ಲಿನ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ. ಹೊರ್ಮುಜ್ ಬಳಿ ಯಾವ ಪ್ರದೇಶದಲ್ಲಿ ಅಮೆರಿಕ ಮಿಲಿಟರಿ ಮೇಲೆ ದಾಳಿ ನಡೆಸಿದೆ ಎಂಬುದರ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಅಮೆರಿಕದ ದಾಳಿಗೆ ಪ್ರತಿಯಾಗಿ ತಾವೂ ನಿರ್ಣಾಯಕ ದಾಳಿ ನಡೆಸಿದ್ದೇವೆ ಎಂದು ಐಆರ್‌ಜಿಸಿ ತಿಳಿಸಿರುವುದಾಗಿ ಇರಾನ್‌ನ ಸುದ್ದಿ ಸಂಸ್ಥೆ ಐಎಸ್‌ಎನ್‌ಎ ವರದಿ ಮಾಡಿತ್ತು. ಸ್ವಲ್ಪ ಸಮಯದಲ್ಲೇ ಎಕ್ಸ್ ಪೋಸ್ಟ್‌ ಡಿಲೀಟ್ ಮಾಡಲಾಗಿದೆ.

ಫೆಬ್ರುವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಬಳಿಕ ಹೊರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ ಜಾಗತಿಕ ತೈಲ ಬಿಕ್ಕಟ್ಟನ್ನು ಸೃಷ್ಟಿಸಲಾಗಿತ್ತು. ಹಲವು ಬಾರಿ ಯುದ್ಧ ವಿರಾಮ ಮಾತುಕತೆ ನಡೆದರೂ ಫಲ ನೀಡಿರಲಿಲ್ಲ. ಇತ್ತೀಚೆಗೆ, ಎರಡೂ ದೇಶಗಳು ಅಳೆದುತೂಗಿ ಮಧ್ಯಂತರ ಶಾಂತಿ ಒಪ್ಪಂದ ತಿಳುವಳಿಕೆಗೆ ಸಹಿ ಹಾಕಿದ್ದವು. ಈ ಒಪ್ಪಂದದ ತಾಂತ್ರಿಕ ಅಂಶಗಳ ಚರ್ಚೆ ನಡೆಯುತ್ತಿರುವಾಗಲೇ ಪರಸ್ಪರ ದಾಳಿ ನಡೆಸುವ ಮೂಲಕ ಯುದ್ಧ ಮುಂದುವರಿಯುವ ಸೂಚನೆ ನೀಡಿವೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries