HEALTH TIPS

ಅಮೆರಿಕ-ಇರಾನ್ ಒಪ್ಪಂದ ಒಪ್ಪಲ್ಲ, ಲೆಬನಾನ್ ವಿರುದ್ಧ ಕಾರ್ಯಾಚರಣೆ ಎಂದ ಇಸ್ರೇಲ್

 ಜೆರುಸಲೆಮ್: ಲೆಬನಾನ್ ಸೇರಿ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಅಂತ್ಯ ಕುರಿತಂತೆ ಅಮೆರಿಕ ಮತ್ತು ಇರಾನ್ ಮಾಡಿಕೊಂಡಿರುವ ಶಾಂತಿ ಒಪ್ಪಂದವನ್ನು ಖಂಡಿಸಿರುವ ಇಸ್ರೇಲ್‌ನ ಇಬ್ಬರು ಬಲಪಂಥೀಯ ಸಚಿವರು, ನಮ್ಮ ದೇಶ ಇದನ್ನು ಇಸ್ರೇಲ್ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.


'ಟ್ರಂಪ್ ಒಪ್ಪಂದವು ನಮಗೆ ಅನ್ವಯಿಸುವುದಿಲ್ಲ. ಇದರಲ್ಲಿ ನಾವು ಪಾರ್ಟಿಯಾಗಿರಲಿಲ್ಲ. ಈ ಒಪ್ಪಂದವು ನಮ್ಮ ದೇಶದ ಭದ್ರತೆಯನ್ನು ಖಚಿತಪಡಿಸುವುದಿಲ್ಲ' ಎಂದು ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್ ಗ್ವಿರ್ ತಮ್ಮ ಟೆಲಿಗ್ರಾಂ ಚಾನಲ್‌ನಲ್ಲಿ ಹೇಳಿದ್ದಾರೆ.

'ಹಿಜ್ಬುಲ್ಲಾ ನಿಗ್ರಹವಿಲ್ಲದೇ ಮಾಡಿಕೊಳ್ಳುವ ಯಾವುದೇ ಒಪ್ಪಂದವನ್ನು ನಾವು ಒಪ್ಪಿಕೊಳ್ಳಬಾರದು. ನಮ್ಮ ಸೇನೆ ವಶಪಡಿಸಿಕೊಂಡಿರುವ ಮತ್ತು ಭಯೋತ್ಪಾದಕ ನೆಲೆಯನ್ನು ಧ್ವಂಸ ಮಾಡಿರುವ ಭೂಮಿಯಿಂದ ಒಂದು ಇಂಚಿನಷ್ಟೂ ಕಾಲ್ತೆಗೆಯುವ ಪ್ರಶ್ನೆಯೇ ಇಲ್ಲ' ಎಂದಿದ್ದಾರೆ.

ಈ ಒಪ್ಪಂದವು ಇಸ್ರೇಲ್‌ಗೆ ಮಾರಕವಾಗಿದೆ ಎಂದಿರುವ ಹಣಕಾಸು ಸಚಿವ ಬೆಜಲೆಲ್ ಸ್ಮೊಟ್ರಿಕ್, ಇರಾನ್ ಅನ್ನು ದುರ್ಬಲಗೊಳಿಸುವಲ್ಲಿ ಅಮೆರಿಕ-ಇಸ್ರೇಲ್ ನಡೆಸಿದ ಅನೇಕ ಕಾರ್ಯಾಚರಣೆ ಯಶಸ್ಸು ಕಂಡಿವೆ. ಇರಾನ್‌ನ ಆಡಳಿತ ಕೊನೆಗೊಳಿಸಲು ನಾವು ಕಾರ್ಯಾಚರಣೆ ಮುಂದುವರಿಸಬೇಕಿದೆ. ಇರಾನ್ ಅಣ್ವಸ್ತ್ರ ಹೊಂದುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದಿದ್ಧಾರೆ.

'ಹಿಜ್ಬುಲ್ಲಾವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಇಸ್ರೇಲ್ ರಕ್ಷಣಾ ಪಡೆಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟು ಲೆಬನಾನ್‌ನಲ್ಲಿ ಕಾರ್ಯಾಚರಣೆ ಮುಂದುವರಿಸುತ್ತೇವೆ'ಎಂದಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries