HEALTH TIPS

ಪ್ಯಾಂಗೊಂಗ್ ತಟದಲ್ಲಿ ಸೇನೆ, ನೀರಿನಡಿಯಲ್ಲಿ ನೌಕಾಪಡೆ ಯೋಗಾಭ್ಯಾಸ

 ನವದೆಹಲಿ: ಪ್ರತಿವರ್ಷ ಜೂನ್ 21ರಂದು ವಿಶ್ವದೆಲ್ಲೆಡೆ ಯೋಗ ದಿನ ಆಚರಿಸಲಾಗುತ್ತದೆ.12ನೇ ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ ಪ್ಯಾಂಗೊಂಗ್ ಸರೋವರದ ತಟದಲ್ಲಿ ಯೋಗ ಮಾಡಿದೆ. ಅತ್ತ, ಭಾರತೀಯ ನೌಕಾಪಡೆಯು ನೀರಿನ ಆಳಕ್ಕೆ ಇಳಿದು ಯೋಗ ಪ್ರದರ್ಶಿಸಿದೆ. 


ಸದ್ಯ, ಎರಡು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

ಹಿಮಾಲಯದ ತಪ್ಪಲಿನಲ್ಲಿರುವ ಪ್ರಸಿದ್ಧ ತಾಣಗಳಲ್ಲಿ ಒಂದಾದ ಪ್ಯಾಂಗೊಂಗ್ ತ್ಸೋ ಸರೋವರದ ದಂಡೆ ಮೇಲೆ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ ಯೋಗ ಪ್ರದರ್ಶಿಸಿದೆ. ಪ್ರಕೃತಿ ಮಡಿಲಲ್ಲಿ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಿದ್ದಾರೆ.

ಮೆಚ್ಚುಗೆ ವ್ಯಕ್ತವಾಗಿರುವ ಮತ್ತೊಂದು ವಿಡಿಯೊದಲ್ಲಿ ಭಾರತೀಯ ನೌಕಪಡೆ ನೀರಿನ ಆಳದಲ್ಲಿ ಕುಳಿತು ಯೋಗ ಮಾಡಿದೆ. 








'ಐಎನ್‌ಎಸ್ ಸತ್ವಾಹನ' ಕೇಂದ್ರದಿಂದ ನೀರಿನ ಅಡಿಯಲ್ಲಿ ಒಂದು ವಿಶಿಷ್ಟ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆಯ 40 ಸಿಬ್ಬಂದಿ ಭಾಗವಹಿಸಿದ್ದರು. ನೀರಿನ ಆಳಕ್ಕೆ ಇಳಿದ ನೌಕಪಡೆ ವಿವಿಧ ಭಂಗಿಯನ್ನು ಪ್ರದರ್ಶಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries