ಅಯೋಧ್ಯೆ: ನಿಗದಿತ ಸಮಯದವರೆಗಿನ ಸಿಸಿಟಿವಿ ದೃಶ್ಯಾವಳಿ ಮಾತ್ರ ಲಭ್ಯವಿರುವ ಕಾರಣ ಅಯೋಧ್ಯೆಯ ರಾಮ ಮಂದಿರಕ್ಕೆ ನೀಡಲಾಗಿರುವ ದೇಣಿಗೆ ದುರುಪಯೋಗ ಕುರಿತಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಭಾರಿ ಹಿನ್ನಡೆಯಾಗಿದೆ.
ಮೂಲಗಳ ಪ್ರಕಾರ, ರಾಮ ಮಂದಿರ ಮತ್ತು ಟ್ರಸ್ಟ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ವಿಡಿಯೊಗಳು 45 ದಿನಗಳವರೆಗೆ ಮಾತ್ರ ಇರಲಿದ್ದು, ನಂತರ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿವೆ.
ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಭಕ್ತರು ನೀಡಿರುವ ದೇಣಿಗೆ, ಬೆಲೆಬಾಳುವ ವಸ್ತುಗಳ ದುರುಪಯೋಗವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆಗೆ ಉತ್ತರ ಪ್ರದೇಶ ಸರ್ಕಾರವು ಜೂನ್ 13ರಂದು ಎಸ್‌ಐಟಿ ರಚಿಸಿದೆ.
ಸಿಸಿಟಿವಿ ಟ್ಯಾಂಪರಿಂಗ್ ಆಗಿರುವ ಆಗಿರುವ ಅನುಮಾನವನ್ನೂ ಎಸ್‌ಐಟಿ ವ್ಯಕ್ತಪಡಿಸಿದ್ದು, ಡಿಲೀಟ್ ಆಗಿರುವ ದೃಶ್ಯಾವಳಿ ಪತ್ತೆಗೆ ಪ್ರಯತ್ನಿಸಲಿದೆ. ಈ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯದ ಮೊರೆಹೋಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಕಳೆದ 45 ದಿನಗಳಲ್ಲಿ ಯಾವುದೇ ತಿರುಚುವಿಕೆ ನಡೆದಿದ್ದರೂ ತಾಂತ್ರಿಕ ಕುರುಹುಗಳು ಸಿಗಲಿವೆ. ವಿಧಿ ವಿಜ್ಞಾನ ಪ್ರಯೋಗಾಲಯದ ಮೂಲಕ ಅದನ್ನು ಪತ್ತೆ ಮಾಡಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ದೇವಾಲಯದ ನೌಕರರು ವಿಚಾರಣೆ ವೇಳೆ ವೈರುಧ್ಯದಿಂದ ಕೂಡಿದ ಹೇಳಿಕೆಗಳನ್ನು ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ದೇಣಿಗೆ ಹಣವನ್ನು ಕಳವು ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಹ ಆರೋಪಿಸಿದ್ದರು.
!['e5ba9c3bd6ba75a8def0365661293562bf5a5c588d77a8b9c47385065b0f890b.webp' failed to upload. TransportError: Error code = 7, Path = /_/BloggerUi/data/batchexecute, Message = There was an error during the transport or processing of this request., HTTP status = 0, Unknown HTTP error (HTTP Status: 0) (XHR Error Code: 6) (XHR Error Message: ' [0]')](https://www.blogger.com/img/transparent.gif)

