HEALTH TIPS

ಆರೋಪಗಳಿಗೆ ಸಾಕ್ಷ್ಯ ಕೇಳಿದ್ದಕ್ಕೆ ಸಿಟ್ಟಾಗಿ ಸಂದರ್ಶನದಿಂದ ಹೊರನಡೆದ ಟ್ರಂಪ್

ವಾಷಿಂಗ್ಟನ್: 'ಇಲ್ಲಿಗೆ ನಿಲ್ಲಿಸೋಣ. ಸಾಕಾಗಿದೆ ನನಗೆ. ಥ್ಯಾಂಕ್ಯೂ ಡಾರ್ಲಿಂಗ್‌'

ಎನ್‌ಬಿಸಿ ಸುದ್ದಿ ವಾಹಿನಿಯ ಸಂದರ್ಶನದ ವೇಳೆ ಮಾತುಕತೆ ಬಿರುಸು ಪಡೆದು, ವಾಗ್ವಾದಕ್ಕೆ ತಿರುಗುತ್ತಿದ್ದಂತೆ ಹೀಗೆ ಹೇಳಿ, ಕಾರ್ಯಕ್ರಮದಿಂದಲೇ ಹೊರನಡೆದಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌.

'ಮೀಟ್‌ ದಿ ಪ್ರೆಸ್‌' ಸಂದರ್ಶನದ ವೇಳೆ ನಡೆದಿರುವ ಈ ಪ್ರಸಂಗ ಅಮೆರಿಕದಾದ್ಯಂತ ಸಂಚಲನ ಸೃಷ್ಟಿಸಿದೆ.

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮಗಳ ನಡೆದಿವೆ ಎಂದು ಹಲವು ಬಾರಿ ಆರೋಪ ಮಾಡಿರುವ ಟ್ರಂಪ್‌, ಸದ್ಯ ನಡೆಯುತ್ತಿರುವ ಕ್ಯಾಲಿಫೋರ್ನಿಯಾ ಚುನಾವಣೆಯ ಪಾರದರ್ಶಕತೆ ಬಗ್ಗೆಯೂ ಆಪಾದನೆ ಮಾಡಿದ್ದಾರೆ. ಅವುಗಳನ್ನೆಲ್ಲ, ಸಂದರ್ಶನದ ವೇಳೆ ಸಮರ್ಥಿಸಿಕೊಳ್ಳಲು ಮುಂದಾಗಿದ್ದ ಅವರಿಗೆ, ಸಂದರ್ಶಕಿ ಕ್ರಿಸ್ಟನ್‌ ವೆಲ್ಕರ್‌ ಆಘಾತ ನೀಡಿದ್ದಾರೆ. ಪ್ರತಿ ಆರೋಪಕ್ಕೂ ಪೂರಕ ಸಾಕ್ಷ್ಯಗಳಿಗೆ ಒತ್ತಾಯಿಸಿದ್ದಾರೆ. ಇದರಿಂದಾಗಿ, ಮಾತುಕತೆ ವಾಗ್ವಾದಕ್ಕೆ ತಿರುಗಿದೆ. ಸಿಟ್ಟಾದ ಟ್ರಂಪ್‌, ಮೈಕ್ರೊಫೋನ್ ತೆಗೆದಿಟ್ಟು ಎದ್ದು ಹೋಗಿದ್ದಾರೆ.

ಇರಾನ್ ಜೊತೆಗಿನ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆಯ ಸ್ಥಿತಿ ಕುರಿತು ಚರ್ಚೆ ಆರಂಭವಾಯಿತು. ಇದೇ, ವೇಳೆ ಚುನಾವಣಾ ಆಕ್ರಮ, ಜೋ ಬೈಡನ್‌ ನೇತೃತ್ವದ ಹಿಂದಿನ ಸರ್ಕಾರ, ಮಾಧ್ಯಮಗಳ ವಿರುದ್ಧ ಟ್ರಂಪ್‌ ಗುಡುಗಿದ್ದಾರೆ.

ಚುನಾವಣೆ ಅಕ್ರಮಗಳ ಕುರಿತ ಆರೋಪಗಳಿಗೆ ಸಾಕ್ಷ್ಯಗಳ ಕೊರತೆ ಇದೆ ಎಂದು ಕ್ರಿಸ್ಟನ್‌ ಹೇಳಿದ್ದಾರೆ. ಇದರಿಂದ ಕೆರಳಿದ ಟ್ರಂಪ್, 'ನನ್ನ ಮಾತು ಕೇಳಿ. ಸಾಕಷ್ಟು ಪುರಾವೆಗಳಿವೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಇದೀಗ ಕ್ಯಾಲಿಫೋರ್ನಿಯಾದಲ್ಲೂ ಅದೇ ನಡೆಯುತ್ತಿದೆ' ಎಂದು ಆರೋಪಿಸಿದ್ದಾರೆ.

'ಕ್ಯಾಲಿಫೋರ್ನಿಯಾ ಮತ ಎಣಿಕೆಯಲ್ಲಿ ಆಗುತ್ತಿರುವ ವಿಳಂಬವು, ವ್ಯವಸ್ಥೆಯಲ್ಲಿ ಏನೋ ಸರಿಯಿಲ್ಲ ಎಂಬುದಕ್ಕೆ ಸಾಕ್ಷ್ಯವಾಗಿದೆ' ಎಂದು ಪ್ರತಿಪಾದಿಸಿದ್ದಾರೆ.

ಅಂಚೆ ಮತಗಳು ತಲುಪುವುದು ತಡವಾದ ಕಾರಣ, ಮತ ಎಣಿಕೆ ವಿಳಂಬವಾಗಿದೆ ಎಂದು ಕ್ರಿಸ್ಟನ್‌ ಹೇಳಿದ್ದಾರೆ. ಅದನ್ನು ಒಪ್ಪದ ಟ್ರಂಪ್‌, 'ಆ ರೀತಿ ಏಕೆ ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಾ? ಏಕೆಂದರೆ, ಅವರು ಮೋಸ ಮಾಡುತ್ತಿದ್ದಾರೆ' ಎಂದು ಪುನಃ ಆರೋಪಿಸಿದ್ದಾರೆ.

ಹೀಗೆ, ಸಂದರ್ಶನದುದ್ದಕ್ಕೂ ವಾಗ್ವಾದ ಮುಂದುವರಿದಿದೆ.

ಚುನಾವಣೆ ವೇಳೆ ಹಲವು ಸುದ್ದಿ ವಾಹಿನಿಗಳು ಸರಿಯಾಗಿ ವರದಿ ಪ್ರಕಟಿಸಿಲ್ಲ ಎಂದೂ ಟ್ರಂಪ್ ದೂರಿದ್ದಾರೆ. ಆದರೆ, ಕ್ರಿಸ್ಟಿನ್‌ ಅವರು ನಿರಂತರವಾಗಿ ಪುರಾವೆಗಳನ್ನು ಕೇಳಿದ್ದರಿಂದ ಸಿಡಿಮಿಡಿಗೊಂಡ ಟ್ರಂಪ್‌, 'ಚುನಾವಣೆಯಲ್ಲಿ ಅಕ್ರಮ ನಡೆದಿದೆ. ನೀವೂ ವಂಚಕರಾಗಿದ್ದೀರಿ. ಎನ್‌ಬಿಸಿಯ 'ಮೀಟ್‌ ದಿ ಪ್ರೆಸ್‌' ಸೇರಿದಂತೆ ಎಬಿಸಿ, ಸಿಬಿಎಸ್‌, ಸಿಎನ್‌ಎನ್‌ ಕೂಡ ಕೊಳಕಾಗಿವೆ. ನೀವೆಲ್ಲ ಏಕಪಕ್ಷೀಯವಾಗಿದ್ದೀರಿ' ಎಂದು ಆರೋಪಿಸಿದ್ದಾರೆ.

ಮುಂದುವರಿದು, 'ಕಾರ್ಯಕ್ರಮವನ್ನು ನಿಲ್ಲಿಸೋಣ. ಸಾಕಾಗಿದೆ. ಥ್ಯಾಂಕ್ಯೂ ಡಾರ್ಲಿಂಗ್' ಎಂದು ಮೈಕ್‌ ತೆಗೆದಿಟ್ಟು ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries