HEALTH TIPS

ಜಾಗತಿಕವಾಗಿ ಗೆದ್ದ 'ಒಬ್ಸೆಷನ್'; ರಾತ್ರೋರಾತ್ರಿ 'ಎ' ಲಿಸ್ಟ್ ನಿರ್ದೇಶಕರಾದ ಯುಟ್ಯೂಬರ್

ಜಾಗತಿಕವಾಗಿ 'ಒಬ್ಸೆಷನ್' ಸಿನಿಮಾ ಜನಮನ ಗೆದ್ದಿದೆ. ಕರಿ ಬಾರ್ಕರ್ ಅವರ ಹಾರರ್ ಸಿನಿಮಾ ಗಳಿಕೆ ಜಾಗತಿಕವಾಗಿ 200 ದಶಲಕ್ಷ ಡಾಲರ್ ದಾಟಿದೆ.

ಫೋಕಸ್ ಫೀಚರ್ಸ್‌ ನ ಸಾರ್ವಕಾಲಿಕ ಅತಿದೊಡ್ಡ ಸಿನಿಮಾ ಆಗಿ ಬೆಳೆದಿದೆ. 7.5 ಲಕ್ಷ ಅಮೆರಿಕನ್ ಡಾಲರ್‌ ನಲ್ಲಿ ತಯಾರಾದ ಈ ಸಿನಿಮಾ ಈಗಾಗಲೇ ಜಾಗತಿಕವಾಗಿ 224.7 ದಶಲಕ್ಷ ಡಾಲರ್ ಗಳಿಕೆ ಮಾಡಿದೆ. ಬ್ಲಮ್‌ ಹೌಸ್-ಅಟಾಮಿಕ್ ಮಾನ್‌ ಸ್ಟರ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವು ಇದೀಗ ವಿತರಕ ಸಂಸ್ಥೆ ಫೋಕಸ್ ಫೀಚರ್ಸ್‌ ನ ಅತಿಹೆಚ್ಚು ಬಾಕ್ಸ್ ಆಫೀಸ್ ಗಳಿಕೆಯ ಸಿನಿಮಾವಾಗಿದೆ.

ವಿಶ್ವಕ್ಕೇ ಮಾದರಿಯಾದ ಸಿನಿಮಾ

ಈ ಸಿನಿಮಾ ಇಂದು ಇಡೀ ವಿಶ್ವಕ್ಕೆ ಒಂದು ಮಾದರಿಯಾಗಿದೆ. ಸಿನಿಮಾ ಗೆಲ್ಲಲು ಕೋಟಿ ಕೋಟಿ ದುಡ್ಡು ಸುರಿಯಬೇಕಿಲ್ಲ, ಪ್ರಚಾರಕ್ಕೆ ತಾರೆಯರ ದಂಡಿನ ಅಗತ್ಯವಿಲ್ಲ. ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವ ಕಲೆ ಗೊತ್ತಿರಬೇಕು ಮತ್ತು ಹೊಸತನ ನೀಡಬೇಕು ಎಂಬುದಕ್ಕೆ ಈ ಸಿನಿಮಾ ಮಾದರಿಯಾಗಿದೆ.

ಫೋಕಸ್ ಫೀಚರ್ಸ್ 2019ರಲ್ಲಿ ವಿತರಿಸಿದ್ದ 'ಡೌನ್‌ ಟನ್ ಅಬ್ಬೆ' ಜಾಗತಿಕವಾಗಿ 194.6 ದಶಲಕ್ಷ ಡಾಲರ್ ಗಳಿಕೆ ಮಾಡಿತ್ತು. ಇದೀಗ 'ಒಬ್ಸೆಷನ್' ಆ ದಾಖಲೆಯನ್ನು ಮೀರಿಸಿದೆ. ಸಿನಿಮಾ ಅಮೆರಿಕದಲ್ಲಿ 152.1 ದಶಲಕ್ಷ ಡಾಲರ್ ಗಳಿಕೆ ಮಾಡಿದ್ದರೆ, ವಿದೇಶದಲ್ಲಿ 57 ದೇಶಗಳ 6,825 ಚಿತ್ರಮಂದಿರಗಳಲ್ಲಿ 72.6 ದಶಲಕ್ಷ ಡಾಲರ್ ಗಳಿಕೆ ಮಾಡಿದೆ.

ಟೊರಾಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫೋಕಸ್ ಸುಮಾರು 15 ದಶಲಕ್ಷ ಡಾಲರ್‌ ಗೆ 'ಒಬ್ಸೆಷನ್' ಚಿತ್ರದ ವಿತರಣಾ ಹಕ್ಕುಗಳನ್ನು ಸ್ವಾಧೀನಪಡಿಸಿಕೊಂಡಾಗ, ಅದು ಯುನಿವರ್ಸಲ್ ಒಡೆತನದ ಸ್ಪೆಷಾಲಿಟಿ ಲೇಬಲ್‌ನ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಿತ್ರವಾಗಲಿದೆ ಎಂದು ಯಾರಿಗೂ ತಿಳಿದಿರಲಿಲ್ಲ.

ಯುಟ್ಯೂಬರ್ ತಯಾರಿಸಿದ ಸಿನಿಮಾ

ಕರಿ ಬಾರ್ಕರ್ ಹೆಚ್ಚು ಪರಿಚಿತವಲ್ಲದ ಪಾತ್ರವರ್ಗದೊಂದಿಗೆ 7,50,000 ಡಾಲರ್ ವೆಚ್ಚದಲ್ಲಿ 'ಒಬ್ಸೆಷನ್' ನಿರ್ದೇಶಿಸಿದ್ದಾರೆ. ಹಾಲಿವುಡ್‌ನ ಘಟಾನುಘಟಿ ಸಿನಿಮಾಗಳಿಗೆ ಸೆಡ್ಡು ಹೊಡೆದ ಈ ಚಿತ್ರದ ಹಿಂದಿರುವ ಕರಿ ಬಾರ್ಕರ್ ಅವರು ಹಾರರ್ ಸಿನಿಮಾಗಳಿಗೆ ಸುಪರಿಚಿತರು.

ಇದಕ್ಕೂ ಮೊದಲು ಅವರು ಯೂಟ್ಯೂಬ್‌ ನಲ್ಲಿ ಉಚಿತವಾಗಿ ಪ್ರಕಟಿಸಿದ್ದ 'ದಿ ಚೇರ್' ಹಾರರ್ ಚಿತ್ರ ಹಾಗೂ ಅವರ ಹಾಸ್ಯ ಚಾನೆಲ್ 'ದ್ಯಾಟ್ಸ್ ಎ ಬ್ಯಾಡ್ ಐಡಿಯಾ' ಮೂಲಕ ಜನಪ್ರಿಯರಾಗಿದ್ದರು. ಯೂಟ್ಯೂಬ್‌ ನಲ್ಲಿ ಹಾಸ್ಯ ವಿಡಿಯೊಗಳನ್ನು ಮಾಡುತ್ತಿದ್ದ ಕಂಟೆಂಟ್ ಕ್ರಿಯೇಟರ್ ಆಗಿದ್ದ ಅವರು, 'ಒಬ್ಸೆಷನ್' ಮೂಲಕ ಈಗ 'ಎ' ಲಿಸ್ಟ್ ಚಲನಚಿತ್ರ ನಿರ್ದೇಶಕರ ಸಾಲಿಗೆ ಸೇರಿದ್ದಾರೆ.

ಈಗಾಗಲೇ ತಮ್ಮ ಮುಂದಿನ ಚಿತ್ರ 'ಎನಿಥಿಂಗ್ ಬಟ್ ಘೋಸ್ಟ್' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. 'ಒಬ್ಸೆಷನ್' ಸಿನಿಮಾ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಚಿತ್ರವಾಗುವತ್ತ ಸಾಗುತ್ತಿದ್ದು, 'ಪ್ರಾಜೆಕ್ಟ್ ಹೇಲ್ ಮೇರಿ'ಯನ್ನು ಶೀಘ್ರವೇ ಮೀರಿಸುವ ಸಾಧ್ಯತೆಯಿದೆ.

ಕರಿ ಬಾರ್ಕರ್ ಕೇವಲ 800 ಡಾಲರ್‌ (ಸುಮಾರು 66 ಸಾವಿರ ರೂಪಾಯಿ) ವೆಚ್ಚದಲ್ಲಿ ನಿರ್ಮಿಸಿದ್ದ 'ಮಿಲ್ಕ್ ಅಂಡ್ ಸೀರಿಯಲ್' ಎಂಬ ಕಿರುಚಿತ್ರವನ್ನು ನೋಡಿದ ಬ್ಲಮ್‌ಹೌಸ್ ಪ್ರೊಡಕ್ಷನ್ಸ್ ಸಂಸ್ಥೆ ಅವರಿಗೆ ಸಿನಿಮಾ ಮಾಡುವ ಅವಕಾಶ ನೀಡಿತ್ತು. ಹೀಗೆ ತಯಾರಾದ 'ಒಬ್ಸೆಷನ್' ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದೆ.

ಸಿನಿಮಾದ ವಿಶೇಷತೆ ಏನು?

ಈ ಸಿನಿಮಾ ಸರಳವಾದ ಕಥೆಯನ್ನು ಹೊಂದಿದ್ದರೂ ನೋಡುಗರಲ್ಲಿ ಚಳಿ ಹುಟ್ಟಿಸುತ್ತದೆ. ತನ್ನ ಬಾಲ್ಯದ ಗೆಳತಿಯ ಪ್ರೀತಿಯನ್ನು ಪಡೆಯಲು ಹಂಬಲಿಸುವ ಯುವಕ ಮಾಂತ್ರಿಕ ಆಟಿಕೆಯೊಂದರ ಮೊರೆ ಹೋಗುತ್ತಾನೆ. ಅವನಿಗೆ ಅಂದುಕೊಂಡಂತೆ ಪ್ರೀತಿ ಸಿಗುತ್ತದೆ. ಆದರೆ ಆ ಪ್ರೀತಿ ಮಿತಿಮೀರಿ 'ಒಬ್ಸೆಷನ್' ಅಥವಾ ಹುಚ್ಚುತನವಾಗಿ ಬದಲಾಗಿದಾಗ ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ಹಾರರ್ ಜೊತೆಗೆ ಡಾರ್ಕ್ ಕಾಮಿಡಿ ಹಾಗೂ ರೊಮ್ಯಾಂಟಿಕ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವುದೇ ಈ ಚಿತ್ರದ ವಿಶೇಷತೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries