ಪರಿಸ್ಥಿತಿಯನ್ನು ಅವಲೋಕಿಸಲಾಗಿದ್ದು, ವಾಣಿಜ್ಯ ಎಲ್‌ಪಿಜಿ ವಿತರಣೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ರಾಜ್ಯಗಳಿಗೆ ತಿಳಿಸಿದೆ.
''ವಾಣಿಜ್ಯ ಅಡುಗೆ ಅನಿಲ ಪೂರೈಕೆಯನ್ನು ಬಿಕ್ಕಟ್ಟು ಪೂರ್ವ ಮಟ್ಟಕ್ಕೆ ಮರುಸ್ಥಾಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ'' ಎಂದು ರಾಜ್ಯಗಳಿಗೆ ಗುರುವಾರ ಬರೆದ ಪತ್ರದಲ್ಲಿ ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿ ನೀರಜ್ ಮಿತ್ತಲ್ ತಿಳಿಸಿದ್ದಾರೆ.
ಸಗಟು ಅಡುಗೆ ಅನಿಲ ಪೂರೈಕೆಯನ್ನು ಬಿಕ್ಕಟ್ಟು ಪೂರ್ವ ಮಟ್ಟದ 50 ಶೇಕಡಕ್ಕೆ ಏರಿಸಬಹುದಾಗಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.

