ಪಾಸ್ಪೋರ್ಟ್ ಕಾಯ್ದೆ 1967ರ ಅಡಿಯಲ್ಲಿ ಪಾಸ್ಪೋರ್ಟ್ ಪೌರತ್ವದ ಪುರಾವೆಯಲ್ಲ ಎಂಬ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯಿಂದ ಉಂಟಾಗಿದ್ದ ವಿವಾದದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ.
ಬಿಹಾರದ ಎಸ್ಐಆರ್ ಪ್ರಕ್ರಿಯೆ, ಅಸ್ಸಾಂನ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಮತ್ತು ನಂತರದ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನಗಳಲ್ಲೂ ಪಾಸ್ಪೋರ್ಟ್ಗಳನ್ನು ಸ್ವೀಕರಿಸಲಾಗಿತ್ತು ಹಾಗೂ ಅವು ಈಗಲೂ 12 ಅನುಮತಿಸಲಾದ ದಾಖಲೆಗಳ ಪಟ್ಟಿಯಲ್ಲಿವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
''ಗುರುತನ್ನು ಸಾಬೀತುಪಡಿಸಲು ಪಾಸ್ಪೋರ್ಟ್ ಒಂದು ಪ್ರಮುಖ ದಾಖಲೆಯಾಗಿತ್ತು ಹಾಗೂ ಅದು ಮುಂದೆಯೂ ಆಗಲಿದೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ'' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

