ಕಾಸರಗೋಡು: ಆಲ್ ಕೇರಳ ಪೋಟೊಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ವೆಸ್ಟ್ ಯುನಿಟ್ ವತಿಯಿಂದ ವಿಶ್ವ ರಕ್ತದಾನ ದಿನವನ್ನು ಆಚರಿಸಲಾಯಿತು. ಈ ಸಂದರ್ಭ ಸುಮಾರು 25 ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ಯೂನಿಟ್ ಸದಸ್ಯ ಸುಬ್ರಹ್ಮಣ್ಯ ವಿಡಿಯೋನಿಕ್ಸ್ ಅವರನ್ನು ಸನ್ಮಾನಿಸಲಾಯಿತು.
ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭಾ ಸದಸ್ಯ ರವೀಂದ್ರ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸುಬ್ರಹ್ಮಣ್ಯ ಅವರನ್ನು ಶಾಲುಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಎಕೆಪಿಎ ಜಿಲ್ಲಾ ಸದಸ್ಯ ಮೈಂದಪ್ಪ ಕೆ.ಎಂ, ಜಿಲ್ಲಾ ಜತೆಕಾರ್ಯದರ್ಶಿ ಮನು ಎಲ್ಲೋರ, ಎಕೆಪಿಎ ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ, ಯೂನಿಟ್ ಸದಸ್ಯ ರತೀಶ್ ರಾಮು ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿದರು. ಯೂನಿಟ್ ಪಿಆರ್‍ಒ ವಿನೋದ್ ಕಲ್ಲಂಗೈ ವಂದಿಸಿದರು.



