ಲಖನೌ (PTI): ಅಯೋಧ್ಯೆಯ ರಾಮಮಂದಿರದ ಕಾಣಿಕೆ ಕಳವು ವಿಚಾರದಲ್ಲಿ ಆಡಳಿತ ಮಂಡಳಿಯ ಹಲವು ದೋಷಗಳನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಪತ್ತೆಹಚ್ಚಿದೆ. ಈ ಸಂಬಂಧ ಕಾಣಿಕೆ ಹಾಗೂ ದೇಣಿಗೆಯಾಗಿ ಸ್ವೀಕರಿಸಿದ್ದ ಆಭರಣಗಳ ಲೆಕ್ಕ ಹಾಗೂ ಮೇಲ್ವಿಚಾರಣೆ ನಡೆಸುತ್ತಿದ್ದ 8 ಮಂದಿಯನ್ನು ಈಗಾಗಲೇ ಬಂಧಿಸಿದೆ.
ಕಾಣಿಕೆ ಹಣ ಹಾಗೂ ದೇಣಿಗೆಯನ್ನು ಅಕ್ರಮವಾಗಿ ಹೇಗೆ ವರ್ಗಾಯಿಸಲಾಯಿತು ಹಾಗೂ ಎಷ್ಟು ಮೊತ್ತ ನಗದು ಕಳವು ಮಾಡಲಾಗಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಆದರೂ, ಟ್ರಸ್ಟ್ನ ಗಂಭೀರ ಲೋಪಗಳನ್ನು ಪ್ರಾಥಮಿಕ ವರದಿಯಲ್ಲಿ ಎಸ್ಐಟಿ ಬೊಟ್ಟು ಮಾಡಿ ತೋರಿಸಿದೆ.
ಎಸ್ಒಪಿ ಸ್ಪಷ್ಟ ಉಲ್ಲಂಘನೆ: ನಗದು ಲೆಕ್ಕ ಹಾಕುವ ವೇಳೆ ಭದ್ರತಾ ಸಿಬ್ಬಂದಿಗಳ ನಿಯೋಜನೆ, ಕಾಣಿಕೆ ಲೆಕ್ಕ ಮಾಡುವ ಸಿಬ್ಬಂದಿಯು ಕೊಠಡಿಗೆ ಪ್ರವೇಶ ಹಾಗೂ ಹೊರಗೆ ತೆರಳುವ ವೇಳೆ ಕೂಲಂಕಷ ಪರಿಶೀಲನೆ, ದೇಣಿಗೆ ಲೆಕ್ಕದ ವೇಳೆ ಸೆರೆಹಿಡಿದ ಸಿ.ಸಿ.ಟಿವಿ ದೃಶ್ಯಗಳನ್ನು 180 ದಿನಗಳವರೆಗೂ ರಕ್ಷಿಸಿಡುವುದು ಸೇರಿದಂತೆ 'ಪ್ರಮಾಣಿತ ಕಾರ್ಯಾಚರಣಾ ವಿಧಾನ'ವನ್ನು (ಎಸ್ಒಪಿ) ಪಾಲನೆ ಮಾಡಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಎಸ್ಒಪಿ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ, ಹುಂಡಿಯ ಹಲವು ಕೀಗಳನ್ನು ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ತಮ್ಮ ಬಳಿಯೇ ಇರಿಸಿಕೊಂಡಿದ್ದರು ಎಂದು ತಿಳಿಸಿದೆ. ರಾಮಶಂಕರ್ ಯಾದವ್ ಅವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಚಾಲಕನಾಗಿ ಈ ಹಿಂದೆ ಕೆಲಸ ಮಾಡುತ್ತಿದ್ದರು. ಈಗ ಬಂಧನದಲ್ಲಿದ್ದಾರೆ.
'ಮಂದಿರದಲ್ಲಿ ಹಲವು ಹುಂಡಿಗಳಿದ್ದವು. ರಾಮಶಂಕರ್ ಯಾದವ್ ಅವರು ಹೊಂದಿದ್ದ ಕೀಗಳ ಹುಂಡಿಯ ಹಣದ ಲೆಕ್ಕಾಚಾರದ ವೇಳೆ ಎಸ್ಒಪಿ ಪಾಲನೆಯಾಗಿಲ್ಲ. ಆದರೂ, ಕಳವು ನಡೆದಿದ್ದು ಹೇಗೆ ಎಂಬುದರ ಕುರಿತು ತನಿಖೆ ಮುಂದುವರಿಸಲಾಗಿದೆ' ಎಂದು ಎಸ್ಐಟಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಣಿಕೆ ಎಣಿಕೆಯಲ್ಲಿ ತಪ್ಪು ನಡೆಯುತ್ತಿದೆ ಎಂದು ಟ್ರಸ್ಟ್ನ ಅಧಿಕಾರಿಗಳಿಗೆ ಅನುಮಾನ ಕಂಡುಬಂದ ನಂತರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಪ್ರತಿನಿಧಿಗಳ ಜೊತೆ ಸಭೆ ನಡೆಸಿ, 2025ರಲ್ಲಿ ಎಸ್ಒಪಿಯನ್ನು ಅಂತಿಮಗೊಳಿಸಿದ್ದರು. ಮಂದಿರದ ಟ್ರಸ್ಟ್ನ ಪ್ರಮುಖ ಸದಸ್ಯ ಅನಿಲ್ ಮಿಶ್ರಾ ಹಾಗೂ ಎಸ್ಬಿಐನ ಅಧಿಕಾರಿ ಗೋವಿಂದ್ ಮಿಶ್ರಾ ಅವರು ಎಸ್ಒಪಿಗೆ ಸಹಿ ಹಾಕಿದ್ದರು.
'ನೂತನ ಎಸ್ಒಪಿಯ ಪ್ರಕಾರ, ಕಾಣಿಕೆ ಎಣಿಕೆ ಮಾಡುವ ಸಿಬ್ಬಂದಿ ಕಿಸೆ ಹೊಂದಿರದ ಬಟ್ಟೆ ಧರಿಸಬೇಕು. ಈ ವೇಳೆ ಸೈನಿಕ್ ಸೆಕ್ಯೂರಿಟಿ ಸರ್ವೀಸಸ್ (ಎಸ್ಐಎಸ್)ನ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು, ಕಾಣಿಕೆ ಹಾಗೂ ದೇಣಿಗೆ ಕೊಠಡಿಗೆ ತೆರಳುವ ಸಿಬ್ಬಂದಿಯ ನಿರಂತರ, ದಿಢೀರ್ ಪರಿಶೀಲನೆ ನಡೆಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈ ಯಾವುದು ಕೂಡ ಪಾಲನೆಯಾಗಿರಲಿಲ್ಲ' ಎಂದು ಮೂಲಗಳು ತಿಳಿಸಿವೆ.
ದೇಣಿಗೆ ಎಣಿಕೆಯ ಉಸ್ತುವಾರಿ ಹೊಂದಿದ್ದ ಹಾಗೂ ಈಗ ಬಂಧಿತರಾಗಿರುವ ಆರೋಪಿ ಸುಭಾಶ್ ಶ್ರೀವಾಸ್ತವ, ಈಗ ಕಾರ್ಯಾಚರಣೆಯಲ್ಲಿರುವ ಶ್ರೀರಾಮಮಂದಿರ ಟ್ರಸ್ಟ್ನ ಮೂವರು ಸದಸ್ಯರ ಪೈಕಿ ಒಬ್ಬರ ಶಿಫಾರಸಿನ ಮೇಲೆ ಹುದ್ದೆಗೆ ನೇಮಕಗೊಂಡಿದ್ದರು ಎಂದು ತಿಳಿಸಿದೆ.
ಚಂಪತ್ ರಾಯ್ ರಾಜೀನಾಮೆ: ಈಗ ಎದ್ದಿರುವ ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ ಮಾಡಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಪ್ರಧಾನ ಕಾರ್ಯದರ್ಶಿ ಚಂಪತ್ರಾಯ್ ರಾಜೀನಾಮೆ ನೀಡಿರುವುದನ್ನು ಖಚಿತಪಡಿಸಿದೆ.
ರಾಯ್ ಹಾಗೂ ಟ್ರಸ್ಟ್ನ ಸದಸ್ಯ ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ ಎಂದು ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ತಿಳಿಸಿದ್ದಾರೆ.
ತನಿಖೆಯಲ್ಲಿ ಪತ್ತೆಯಾಗಿದ್ದೇನು?
ಎಸ್ಒಪಿ ಉಲ್ಲಂಘಿಸಿ ದೇಣಿಗೆ ದುರುಪಯೋಗ, ಕಾಣಿಕೆ ಕಳವು
ದೇವಾಲಯದ ದೈನಂದಿನ ನಿರ್ವಹಣೆಯಲ್ಲಿ ಆಡಳಿತ ಮಂಡಳಿಯ ಸ್ಪಷ್ಟ ನಿರ್ಲಕ್ಷ್ಯ
ಮಹಾಕುಂಭಮೇಳದ ವೇಳೆ ಬೃಹತ್ ಕಾಣಿಕೆ ಸಂಗ್ರಹ-
ಲೆಕ್ಕ ಸಿಕ್ಕಿಲ್ಲಇದುವರೆಗೂ ವಿದೇಶಿ ಕರೆನ್ಸಿ ಸೇರಿದಂತೆ ₹80 ಲಕ್ಷ ನಗದು ಪತ್ತೆ
ದೇಣಿಗೆ ಎಣಿಕೆ ಸ್ಥಳದ ಪಕ್ಕದ ಶೌಚಾಲಯದಲ್ಲಿ ₹2.5 ಲಕ್ಷ ನಗದು ಪತ್ತೆ
ಜೈರಾಮ್ ರಮೇಶ್ವಯನಾಡ್(ಕೇರಳ): 'ಅಯೋಧ್ಯೆಯ ರಾಮಮಂದಿರ ಕಾಣಿಕೆ ಕಳವು ನಡೆದಿರುವುದು ದುರದೃಷ್ಟಕರ ಹಾಗೂ ನಾಚಿಕೆಗೇಡಿನ ವಿಚಾರವಾಗಿದೆ. ದೇಣಿಗೆ ಸಂಗ್ರಹಿಸುವ ಹಾಗೂ ರಕ್ಷಿಸುವ ಜವಾಬ್ದಾರಿ ಹೊಂದಿದವರನ್ನು ಹೊಣೆಗಾರಿಕೆ ಮಾಡಬೇಕು' ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಪ್ರಿಯಾಂಕ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ. 'ಇದೊಂದು ನಿಜಕ್ಕೂ ದುರಂತ. ರಾಮನ ಮೇಲೆ ನಂಬಿಕೆಯುಳ್ಳವರು ದೇಣಿಗೆ ನೀಡಿದ್ದರು. ಮಹಿಳೆಯರು ಬಡವರು ಕೂಡ ದೇಣಿಗೆ ನೀಡಿದ್ದಾರೆ. ಇದು ಕೇವಲ ದೊಡ್ಡ ಉದ್ಯಮಿಗಳು ನೀಡಿದ ದೇಣಿಗೆಯಲ್ಲ. ಸಾಮಾನ್ಯ ಜನರೇ ನೀಡಿದ ದೇಣಿಗೆಯಾಗಿತ್ತು. ಈಗ ಅದೇ ಹಣವು ಕಳವಾಗಿದೆ. ನಿಜಕ್ಕೂ ಇದು ದುರಂತ ನಾಚಿಕೆಗೇಡಿನ ವಿಚಾರವಾಗಿದೆ' ಎಂದು ಟೀಕಿಸಿದ್ದಾರೆ.ಕಳವು ನಡೆದಿರುವುದು ದುರಂತ; ತನಿಖೆಗೆ ಆಗ್ರಹ
ಪ್ರಿಯಾಂಕ ಗಾಂಧಿ ಉದ್ಧವ್ ಠಾಕ್ರೆ ಅಧ್ಯಕ್ಷ ಶಿವಸೇನಾ (ಉದ್ಧವ್ ಬಣ)ನೈಜ ಹಿಂದುತ್ವವು ಮಾನವೀಯತೆಯನ್ನು ಕಲಿಸುತ್ತದೆ. ದೇವಾಲಯವನ್ನು ಲೂಟಿ ಮಾಡುವ ಬಿಜೆಪಿಯ ಹಿಂದುತ್ವವನ್ನು ತಿರಸ್ಕರಿಸಬೇಕು. ಬಿಜೆಪಿಮುಕ್ತ ರಾಮನ ಅಗತ್ಯವಿದ್ದು ಇದರ ಹೋರಾಟವನ್ನು ಶಿವಸೇನಾವೇ ಮುನ್ನಡೆಸಲಿದೆ
ಉದ್ಧವ್ ಠಾಕ್ರೆನವದೆಹಲಿ (ಪಿಟಿಐ): ರಾಮಮಂದಿರದ ಕಾಣಿಕೆ- ದೇಣಿಗೆ ಕಳವು ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಕಾಂಗ್ರೆಸ್ ಪ್ರಶ್ನಿಸಿದ್ದು ಈ ಹಗರಣದಲ್ಲಿ ಭಾಗಿಯಾಗಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದೆ. 'ಭ್ರಷ್ಟಾಚಾರವು ಆಳವಾಗಿ ಬೇರೂರಿರುವುದರಿಂದ ಈ ಹಗರಣದ ಕುರಿತು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು' ಎಂದು ಕಾಂಗ್ರೆಸ್ ವಕ್ತಾರ ಅಖಿಲೇಶ್ ಪ್ರಸಾದ್ ಸಿಂಗ್ ಆಗ್ರಹಿಸಿದ್ದಾರೆ. 'ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಬೇಕು. ಜನರ ನಂಬಿಕೆ ಕಳೆದುಕೊಂಡಿರುವ ಈಗಿನ ಟ್ರಸ್ಟ್ ಅನ್ನು ತಕ್ಷಣವೇ ವಿಸರ್ಜಿಸಬೇಕು' ಎಂದು ಆಗ್ರಹಿಸಿದ್ದಾರೆ.

