ಕಾಸರಗೋಡು: ಪಿಎಂಶ್ರೀ ಯೋ ಜನೆ ಕೇರಳದಲ್ಲಿ ಜ್ಯಾರಿಗೊಳಿಸಲಿರುವ ಐಕ್ಯರಂಗ ಸರಕಾರದ ತೀರ್ಮಾನದ ವಿರುದ್ಧ ಸಿಪಿಐ ಕಾಸರಗೋಡು ಮಂಡಲ ಸಮಿತಿ ನೇತೃತ್ವದಲ್ಲಿ ಕಾಸರಗೋಡು ತಾಲೂಕು ಕಚೇರಿಗೆ ಮಾರ್ಚ್, ಧರಣಿ ನಡೆಸಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇರಳದಲ್ಲಿ ಹೇರಲು ನಡೆಸುವ ಯತ್ನದ ವಿರುದ್ಧ ತೀವ್ರ ವಿರೋಧ ಮಾರ್ಚ್‌ನಲ್ಲಿ ಕಂಡು ಬಂತು. ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಮಂಡಲ ಅಸಿಸ್ಟೆಂಟ್ ಸೆಕ್ರೆಟರಿ ತುಳಸೀಧರನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಅಸಿಸ್ಟೆಂಟ್ ಸೆಕ್ರೆಟರಿ ವಿ. ರಾಜನ್ ಮಾತನಾಡಿದರು. ಮಂಡಲ ಕಾರ್ಯದರ್ಶಿ ಬಿಜು ಉಣ್ಣಿತ್ತಾನ್ ಸ್ವಾಗತಿಸಿದರು.
ಚಂದ್ರಗಿರಿ ಜಂಕ್ಷನ್‌ನಿಂದ ಆರಂಭಗೊಂಡ ಮೆರವಣಿಗೆಗೆ ರೇಣುಕ ಭಾಸ್ಕರನ್, ನಾರಾಯಣನ್, ಪಿ. ರಾಜನ್, ಕಿಶೋರ್ ಕೆ.ಟಿ, ಎಂ. ಕೃಷ್ಣನ್ ನಾಯರ್, ಶ್ರೀಜಿತ್, ಸಿ.ಕೆ.ಎಂ. ಮುನೀರ್, ಅಶ್ವತಿ, ಸರಿತ ಎಸ್.ಎನ್, ಅಸ್ಕರ್ ಕಡವತ್, ಸುಧಾಕರನ್, ನವೀನ್ ಕುಮಾರ್, ಮುರಳೀಧರನ್ ನೇತೃತ್ವ ನೀಡಿದರು.

