ತಳಿಪರಂಬ: ಯುಡಿಎಫ್ ಬೆಂಬಲದೊಂದಿಗೆ ತಳಿಪರಂಬದಿಂದ ಸ್ಪರ್ಧಿಸಿ ಗೆದ್ದ ಶಾಸಕ ಟಿ.ಕೆ. ಗೋವಿಂದನ್ ಅವರಿಗೆ ಮೊಬೈಲ್ ಪೋನ್ ಮೂಲಕ ಜೀವ ಬೆದರಿಕೆ ಬಂದಿದೆ. ಶುಕ್ರವಾರ ಮಧ್ಯಾಹ್ನ 3.50 ರ ಸುಮಾರಿಗೆ ಸಚಿವ ಸನ್ನಿ ಜೋಸೆಫ್ ಅವರೊಂದಿಗೆ ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾಗ ಬೆದರಿಕೆ ಬಂದಿದೆ.
ಶಾಸಕರ ಆಪ್ತ ಸಿಬ್ಬಂದಿ ಪಿ.ವಿ. ಜಯನ್ ಪೋನ್ ಸ್ವೀಕರಿಸಿದರು. ‘ನಿಮಗೆ ಒಮ್ಮೆ ಎಚ್ಚರಿಕೆ ನೀಡಲಾಗಿತ್ತು, ಜೈಲು ನಮಗೆ ಸಮಸ್ಯೆಯಲ್ಲ, ಮತ್ತು ನೀವು ಹೀಗೆ ಮುಂದುವರಿಯುವಂತಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಅಶ್ಲೀಲ ಪದಗಳನ್ನು ಸಹ ಬಳಸಲಾಗಿದೆ. ಪೋನ್ ಸಂಖ್ಯೆಯನ್ನು ಪರಿಶೀಲಿಸಿದಾಗ, ಅದು ತಿರುವಂಬಾಡಿಯ ಒಬ್ಬ ವ್ಯಕ್ತಿಗೆ ಸೇರಿದ್ದು ಎಂಬುದು ಸ್ಪಷ್ಟವಾಗಿದೆ. ಚುನಾವಣಾ ಫಲಿತಾಂಶ ಘೋಷಣೆಯ ದಿನದಂದು ಇದೇ ರೀತಿಯ ಬೆದರಿಕೆಗಳು ಬಂದಿವೆ ಎಂದು ಪಿ.ಎ. ತಿಳಿಸಿದರು.
ಶಾಸಕರಾದ ಟಿ.ಕೆ. ಗೋವಿಂದನ್ ಮತ್ತು ವಿ. ಕುಂಞÂ ಕೃಷ್ಣನ್ ಗುರುವಾರ ಕಣ್ಣೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಿಪಿಎಂ ಅನ್ನು ಟೀಕಿಸಿದ್ದರು. ಪಿಎ ಪಿ.ವಿ. ಜಯನ್ ಅವರ ದೂರಿನ ಮೇರೆಗೆ ಮಯ್ಯಿಲ್ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



