ಬದಿಯಡ್ಕ: ಉಬ್ರಂಗಳದ ಗ್ರಾಮ ವಿಕಾಸ ಸಮಿತಿ ನೇತೃತ್ವದಲ್ಲಿ ಶ್ರೀ ಭಾರ್ಗವ ರಾಮ ಬಾಲಗೋಕುಲದ ಮಕ್ಕಳಿಗೆ ಕಲಿಕೋಪಕರಣಗಳ ವಿತರಣಾ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಬ್ಡಾಜೆ ಗ್ರಾಮ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ. ನಿರ್ವಹಿಸಿದರು. ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಸುಬ್ರಾಯ ಭಟ್ ಉಬ್ರಂಗಳ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯವರಾಗಿ ಖ್ಯಾತ ಗೀತರಚನಕಾರ ಮತ್ತು ಗಾಯಕ ರತ್ನಾಕರ ಒಡಂಗಲ್ಲು ಆಗಮಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಗೋವಿಂದ ರಾಜ್ ಮೈಲ್ತೋಟಿ, ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ, ಗಂಗಾಧರ ಮವ್ವಾರು, ಉದಯ ಕುಮಾರ್ ಚೂರಿಕ್ಕೋಡು, ನಿವೃತ್ತ ಅಧ್ಯಾಪಕ ಪುರುಷೋತ್ತಮ ಪ್ರಸಾದ್ ಗೋವಿಂದಕೂಡ್ಲು, ಕೃಷ್ಣ ಮಣಿಯಾಣಿ ಅಗಲ್ಪಾಡಿ, ಗಣರಾಜ ಭಟ್ ಉಬ್ರಂಗಳ, ಪ್ರದೀಪ್ ಬಳ್ಳಕುರಾಯ ಉಬ್ರಂಗಳ, ಸತೀಶ್ ಉಬ್ರಂಗಳ, ಸ್ವಾತಿ ಭಾಸ್ಕರ, ರವಿಕುರುಪ್ ಉಬ್ರಂಗಳ, ಹರೀಶ್ ಉಬ್ರಂಗಳ, ವೇಣುಗೋಪಾಲ್ ಚೂರಿಕ್ಕೋಡು, ಹಾಗೂ ಸಮಿತಿಯ ಹಲವಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುಮಾರು ಹತ್ತು ಸಾವಿರ ರೂ.ಗಳ ಕಲಿಕೋಪಕರಣಗಳನ್ನು ಮಕ್ಕಳಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು. ಹೈಸ್ಕೂಲು ಮತ್ತು ಹೈಯರ್ ಸೆಕೆಂಡರಿ ವಿಭಾಗದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಮಕ್ಕಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸುಮಾರು 33 ಮಕ್ಕಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು. ಆರಂಭದಲ್ಲಿ ರಾಜೇಶ್ ಮಾಸ್ತರ್ ಸ್ವಾಗತಿಸಿ, ರಮ್ಯಾ ಸತೀಶ್ ವಂದಿಸಿದರು. ಉಪಹಾರ ವ್ಯವಸ್ಥೆಯನ್ನೂ ಈ ಸಂದರ್ಭದಲ್ಲಿ ಮಾಡಲಾಗಿತ್ತು. ಬಾಲ ಗೋಕುಲದ ಮಕ್ಕಳು, ಶಿಕ್ಷಕರು, ಹೆತ್ತವರು ಹಾಗೂ ಗ್ರಾಮ ವಿಕಾಸ ಸಮಿತಿ ಉಬ್ರಂಗಳದ ಸದಸ್ಯರು, ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

.jpg)
.jpg)
