ಮಂಜೇಶ್ವರ : 2026-27 ನೇ ಶೈಕ್ಷಣಿಕ ವರ್ಷದ ಮೀಂಜ ಗ್ರಾಮ ಪಂಚಾಯತಿ ಮಟ್ಟದ ಶಾಲಾ ಪ್ರವೇಶೋತ್ಸವ ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಜರಗಿತು.
ಕಾರ್ಯಕ್ರಮವು ನವಾಗತ ಮಕ್ಕಳನ್ನು ಸ್ವಾಗತಿಸುವ ಆಕರ್ಷಕ ಮೆರವಣಿಗೆಯ ಮೂಲಕ ಆರಂಭವಾಯಿತು. ಬಳಿಕ ನಡೆದ ಉದ್ಘಾಟನಾ ಸಮಾರಂಭವನ್ನು ಮೀಂಜ ಗ್ರಾಮ ಪಂಚಾಯತಿನ ಅಧ್ಯಕ್ಷ ತಾಜುದ್ದೀನ್ ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಉಷಾ ಪೂಂಜ, ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾದ ಕೃಷ್ಣ ಬೆಜ್ಜ, ಕ್ಷೇಮಾಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಸೌಮ್ಯ, ಕುಳೂರು ವಾರ್ಡ್ ಸದಸ್ಯೆ ಶರ್ಮಿಳ ಎಂ ಶೆಟ್ಟಿ ಚಾರ್ಲ, ಪಂಚಾಯತಿ ಸದಸ್ಯರಾದ ಶರೀಫ್ ಚಿನಾಲ, ಶಾಲಿನಿ ಶೆಟ್ಟಿ, ಮಂಜೇಶ್ವರ ಬಿ.ಆರ್.ಸಿ. ಯ ಸಿ.ಆರ್.ಸಿ. ಸಂಯೋಜಕಿ ಮೋಹಿನಿ ಉಪಸ್ಥಿತರಿದ್ದರು.
ಪಂಚಾಯಿತಿನ ಮಾಜಿ ಸದಸ್ಯ ಬಾಳಪ್ಪ ಬಂಗೇರ ಹಾಗೂ ಜನಾರ್ಧನ ಪೂಜಾರಿ ಕುಳೂರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಹಾಜಿ ಕಂಚಿಲ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೊಯ್ಯೇಲು, ಹಿರಿಯ ಸದಸ್ಯ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಕವಿತಾ ದೇರಂಬಳ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಪ್ರಿಯಾಂಕ ಕೇಮಜಲ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಇದೇ ಸಂದರ್ಭ ಶಾಲೆಗೆ ನೂತನವಾಗಿ ಸೇರ್ಪಡೆಯಾದ ನವಾಗತ ಮಕ್ಕಳಿಗೆ ಪುಸ್ತಕ, ಬ್ಯಾಗ್, ಸಮವಸ್ತ್ರ, ಹಾಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಪ್ರೀ ಪ್ರೈಮರಿ ಮಕ್ಕಳಿಗೆ ಪಾಠ ಪುಸ್ತಕ ಹಾಗೂ ಸಮವಸ್ತ್ರವನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಕೊಡುಗೆಯಾಗಿ ನೀಡಿದರು. ಪ್ರೀ ಪ್ರೈಮರಿ ಮತ್ತು ಒಂದನೇ ತರಗತಿ ಮಕ್ಕಳಿಗೆ ಬ್ಯಾಗ್ ಹಾಗೂ ಆಟದ ಸಾಮಾಗ್ರಿಯನ್ನು ಅಶ್ವಿನಿ ಜಯಪ್ರಶಾಂತ್ ಪಾಲೆಂಗ್ರಿ ಕೊಡುಗೆಯಾಗಿ ನೀಡಿದರು. ಮಧ್ಯಾಹ್ನದೂಟದ ಪ್ರಾಯೋಜಕತ್ವವನ್ನು ಜಲಜ ಶಶಿಧರ ಶೆಟ್ಟಿ ಪೆÇಯ್ಯೇಲು ಹಾಗೂ ಲಘು ಉಪಹಾರವನ್ನು ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದ ವಹಿಸಿದ್ದರು.
ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ನಯನ ಎಂ. ವಂದಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರಾದ ಅಶ್ವಿನಿ ಎಂ ಹಾಗೂ ಶ್ವೇತ ಇ, ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಶೇಖ್ ಅಬ್ದುಲ್ ಮಜೀದ್ ಚಾರ್ಲ, ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯೆ ಶ್ವೇತ ಕೇಮಜಲ್ ಸಹಕರಿಸಿದರು.

.jpg)
.jpg)
.jpg)
