HEALTH TIPS

ಅಡುಗೆ ಎಣ್ಣೆ ಪೊಟ್ಟಣದ ಗಾತ್ರ ನಿಗದಿಪಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಅಡುಗೆ ಎಣ್ಣೆಗಳನ್ನು ಮಾರಾಟ ಮಾಡುವ ಪೊಟ್ಟಣಗಳ ಗಾತ್ರವು ಇಂತಿಷ್ಟೇ ಇರಬೇಕು, ಕಂಪನಿಗಳು ತಮ್ಮ ಇಚ್ಛೆಗೆಅನುಗುಣವಾದ ಗಾತ್ರ ಹಾಗೂ ಪ್ರಮಾಣದಲ್ಲಿ ಅಡುಗೆ ಎಣ್ಣೆ ಮಾರಾಟ ಮಾಡಲು ಅವಕಾಶವಿಲ್ಲ ಎಂಬ ನಿಯಮ ವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಜಾರಿಗೆ ತಂದಿದೆ. 


ಇದರಿಂದಾಗಿ ಗ್ರಾಹಕರಿಗೆ ಖಾದ್ಯ ತೈಲದ ವಿವಿಧ ಬ್ರ್ಯಾಂಡ್‌ಗಳು ಮತ್ತು ಅವುಗಳ ಮಾರಾಟ ದರವನ್ನು ಹೋಲಿಸಿ, ಖರೀದಿ ಮಾಡಲು ಅನು ಕೂಲ ಆಗಲಿದೆ ಎಂದು ಇಲಾಖೆ ತಿಳಿಸಿದೆ.

ಖಾದ್ಯ ತೈಲದ ಪೊಟ್ಟಣ ಗಾತ್ರ ಮತ್ತು ಅವುಗಳಲ್ಲಿ ಭರ್ತಿ ಮಾಡುವ ತೈಲದ ಪ್ರಮಾಣಕ್ಕೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನಕ್ಕೆ (ಎಸ್‌ಒಪಿ) ಇಲಾಖೆಯು ತಿದ್ದುಪಡಿ ಮಾಡಿದೆ. ತಯಾರಕರು, ಪ್ಯಾಕ್ ಮಾಡುವವರು ಮತ್ತು ಆಮದುದಾರರು ಮೂರು ತಿಂಗಳಿ ನಲ್ಲಿ ಈ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಪರಿಷ್ಕೃತ ಎಸ್‌ಒಪಿ ಪ್ರಕಾರ ಖಾದ್ಯ ತೈಲಗಳನ್ನು ಒಂಬತ್ತು ಬಗೆಯ ಪ್ರಮಾಣಿತ ಗಾತ್ರದ ಪೊಟ್ಟಣಗಳಲ್ಲಿ ಮಾರಾಟ ಮಾಡಬಹುದಾಗಿದೆ. 200 ಎಂ.ಎಲ್/ಗ್ರಾಂ, 500 ಎಂ.ಎಲ್/ಗ್ರಾಂ, 1 ಲೀಟರ್/ಕೆ.ಜಿ, 2 ಲೀಟರ್‌/ಕೆ.ಜಿ, 3 ಲೀಟರ್/ಕೆ.ಜಿ, 4 ಲೀಟರ್/ಕೆ.ಜಿ, 5 ಲೀಟರ್/ಕೆ.ಜಿ, 15 ಲೀಟರ್/ಕೆ.ಜಿ ಮತ್ತು 20 ಲೀಟರ್‌/ಕೆ.ಜಿ ತೂಕದ ‍ಪೊಟ್ಟಣಗಳಲ್ಲಿ ಖಾದ್ಯ ತೈಲ ಮಾರಾಟ ಮಾಡಬಹುದಾಗಿದೆ.

ತಾಳೆ ಎಣ್ಣೆ, ಸೋಯಾಬೀನ್, ಸೂರ್ಯಕಾಂತಿ, ಶೇಂಗಾ, ಸಾಸಿವೆ, ಎಳ್ಳು, ಅಕ್ಕಿ ಹೊಟ್ಟಿನಿಂದ ಮಾಡಿದ ಎಣ್ಣೆ, ಹತ್ತಿ ಬೀಜ ಮತ್ತು ಜೋಳದ ಎಣ್ಣೆ ಸೇರಿದಂತೆ ಪ್ರಮುಖ ಖಾದ್ಯ ತೈಲಗಳು ಹಾಗೂ ಖಾದ್ಯ ತೈಲಗಳ ಮಿಶ್ರಣಕ್ಕೆ ಈ ಎಸ್‌ಒಪಿ ಅನ್ವಯ ಆಗಲಿದೆ ಎಂದು ತಿಳಿಸಿದೆ.

ದೇಶದ ಪ್ರಮುಖ ಖಾದ್ಯ ತೈಲ ಉದ್ಯಮ ಸಂಘಗಳ ಜೊತೆ ನಡೆದ ಮಾತುಕತೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಾನೂನು ಮಾಪನಶಾಸ್ತ್ರ ನಿಯಮಗಳು-2011ರ (ಪ್ಯಾಕ್ ಮಾಡಿದ ಸರಕುಗಳು) ಪ್ರಕಾರ, ಪೊಟ್ಟಣದ ಮೇಲೆ ಖಾದ್ಯ ತೈಲದ ಪ್ರಮಾಣ (ಮಿ.ಲೀ ಅಥವಾ ಲೀ.) ಮತ್ತು ತೂಕವನ್ನು ಸ್ಪಷ್ಟವಾಗಿ ನಮೂದಿಸಬೇಕಿದೆ. ಈ ನಿಬಂಧನೆಗಳು ದೇಶೀಯವಾಗಿ ತಯಾರಿಸಿದ ಮತ್ತು ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳೆರಡಕ್ಕೂ ಅನ್ವಯಿಸುತ್ತದೆ.

200 ಎಂ.ಎಲ್‌/ಗ್ರಾಂ ಮತ್ತು ಅದಕ್ಕಿಂತ ಕಡಿಮೆ ತೂಕ ಇರುವ ಖಾದ್ಯ ತೈಲದ ಪೊಟ್ಟಣಗಳಿಗೆ ಈ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ.

ನಿಗದಿ ಮಾಡಿರುವ ಗಾತ್ರದ ಪೊಟ್ಟಣಗಳಲ್ಲಿ ಖಾದ್ಯ ತೈಲ ಮಾರಾಟವನ್ನು ಕಂಪನಿಗಳು ತಕ್ಷಣದ ಲ್ಲಿಯೇ ಆರಂಭಿಸಲು ಅವಕಾಶ ಇದೆ ಎಂದು ಇಲಾಖೆ ಹೇಳಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries