HEALTH TIPS

ಶ್ವೇತಭವನದ ಹುದ್ದೆ ತೊರೆದ ಟ್ರಂಪ್ ಎ.ಐ ನೀತಿಗಳ ರೂವಾರಿ ಭಾರತ ಮೂಲದ ಶ್ರೀರಾಮ್

 ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಕೃತಕ ಬುದ್ಧಿಮತ್ತೆ ನೀತಿಗಳ ರೂವಾರಿ ಭಾರತದ ಚೆನ್ನೈ ಮೂಲದ ಶ್ರೀರಾಮ್ ಕೃಷ್ಣನ್ ಅವರು ಶ್ವೇತಭವನದ ಹಿರಿಯ ನೀತಿ ಸಲಹೆಗಾರ ಹುದ್ದೆಯನ್ನು ತೊರೆದಿದ್ದಾರೆ. 


ಮೈಕ್ರೋಸಾಫ್ಟ್, ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಕೆಲಸ ಮಾಡಿರುವ 42 ವರ್ಷದ ಶ್ರೀರಾಮ್, ಶನಿವಾರ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರ ಹುದ್ದೆಯಿಂದ ಕೆಳಗಿಳಿಯುವುದಾಗಿ ಪ್ರಕಟಿಸಿದ್ದಾರೆ.

'ಈ ತಿಂಗಳಾಂತ್ಯದಲ್ಲಿ ಶ್ವೇತಭವನದಲ್ಲಿ ನನ್ನ ಹುದ್ದೆಯನ್ನು ತೊರೆಯುತ್ತಿದ್ದೇನೆ. ಸ್ವಲ್ಪ ವಿರಾಮದ ಬಳಿಕ ಅಮೆರಿಕ ಎದುರಿಸುತ್ತಿರುವ ಎ.ಐ ಸವಾಲುಗಳನ್ನು ನಿಭಾಯಿಸಲು ಸಹಾಯ ಮಾಡಲು ಕೆಲಸ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.

ಕೃಷ್ಣನ್ ಅವರು ಟ್ರಂಪ್ ಆಡಳಿತದಲ್ಲಿ 'ಎ.ಐ ಆಯಕ್ಷನ್ ಪ್ಲ್ಯಾನ್‌'ನ ರೂವಾರಿ ಎನಿಸಿದ್ದರು. ಅದು ದೇಶದಾದ್ಯಂತ ಡೇಟಾ ಕೇಂದ್ರಗಳ ನಿರ್ಮಾಣವನ್ನು ಉತ್ತೇಜಿಸಲು ನೀಲನಕ್ಷೆಯನ್ನು ಒದಗಿಸಿತ್ತು.

ಎ.ಐ ಅನ್ನು ನಿಯಂತ್ರಿಸುವ ಟ್ರಂಪ್‌ ಕಾರ್ಯಕಾರಿ ಆದೇಶದ ತಂತ್ರಜ್ಞಾನ ಸಲಹೆಗಾರರಲ್ಲಿ ಕೃಷ್ಣನ್ ಒಬ್ಬರಾಗಿದ್ದರು.

'ಅಮೆರಿಕದ ಜನರ ಸೇವೆ ಸಲ್ಲಿಸುವುದು ಅತಿ ದೊಡ್ಡ ಸವಲತ್ತು ಆಗಿದೆ. ಆ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಡಿಯಲ್ಲಿ ಕೆಲಸ ಸಲ್ಲಿಸುವುದು ಗೌರವವಾಗಿದೆ. ಅವರ ನಾಯಕತ್ವ ಇಲ್ಲದಿದ್ದರೆ ನಾವು ಎ.ಐ ರೇಸ್‌ನಲ್ಲಿ ಮುಂಚೂಣಿಯಲ್ಲಿ ಇರುತ್ತಿರಲಿಲ್ಲ' ಎಂದು ಕೃಷ್ಣನ್ ಹೇಳಿದ್ದಾರೆ.

ಟ್ರಂಪ್ ಆಡಳಿತದಲ್ಲಿ 'ಎ.ಐ ಕ್ರಿಯಾ ಯೋಜನೆ', 'ರಾಷ್ಟ್ರೀಯ ಎ.ಐ. ನೀತಿ ಚೌಕಟ್ಟು' ಮತ್ತು 'ವೇಗವರ್ಧನೆ ಪಾಲುದಾರಿಕೆ' ರೂಪಿಸುವುದಲ್ಲಿ ಕೃಷ್ಣನ್ ಮಹತ್ತರ ಪಾತ್ರ ವಹಿಸಿದ್ದಾರೆ.

'ಕಳೆದ 18 ತಿಂಗಳುಗಳಲ್ಲಿ ಅಮೆರಿಕ ಹಾಗೂ ಮಿತ್ರರಾಷ್ಟ್ರಗಳು ಎದುರಿಸುತ್ತಿರುವ ಎ.ಐ ಸವಾಲುಗಳನ್ನು ನಿಭಾಯಿಸಲು ನನಗೆ ಮುಂಚೂಣಿಯ ಸ್ಥಾನವನ್ನು ನೀಡಲಾಗಿತ್ತು. ಇಂಧನವಾಗಲಿ, ದತ್ತಾಂಶ ಕೇಂದ್ರಗಳಾಗಳಿ, ಎ.ಐ ಸಂಬಂಧ ನಾವೆಲ್ಲವೂ ಒಟ್ಟಾಗಿ ನ್ಯಾವಿಗೇಟ್ ಮಾಡಬೇಕಾದ ಅನೇಕ ಸಮಸ್ಯೆಗಳಿವೆ. ಅಮೆರಿಕ ಹಾಗೂ ಮಿತ್ರರಾಷ್ಟ್ರಗಳಿಗೆ ಎದುರಾಗಿರುವ ಈ ಸವಾಲುಗಳನ್ನು ನಿಭಾಯಿಸಲು ಸಂಸ್ಥೆ ನಿರ್ಮಿಸುವ ಬಗ್ಗೆ ಯೋಚಿಸುತ್ತಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

ಉದ್ಯಮಿ ಇಲಾನ್ ಮಸ್ಕ್ ಅವರ ಆಪ್ತರಾಗಿರುವ ಕೃಷ್ಣನ್, 2022ರಲ್ಲಿ ಟ್ವಿಟರ್ ಅನ್ನು ಸ್ವಾಧೀನ ಮಾಡಲು ಸಲಹೆಯನ್ನು ನೀಡಿದ್ದರು.

1984ರಲ್ಲಿ ಚೆನ್ನೈಯಲ್ಲಿ ಜನಿಸಿದ ಕೃಷ್ಣನ್, ಎಸ್‌ಆರ್‌ಎಂ ವಿಶ್ವವಿದ್ಯಾಲಯದಿಂದ ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದರು. ನಂತರ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡಲು ಅಮೆರಿಕಕ್ಕೆ ತೆರಳಿದ್ದರು.

ಶ್ರೀರಾಮ್ ಕೃಷ್ಣನ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries